ಭಾರತ್​ ಬಂದ್​: ಅಂಗಡಿಗಳಿಗೆ ನುಗ್ಗಿ ಬಲವಂತದಿಂದ ಬಾಗಿಲುಗಳನ್ನು ಮುಚ್ಚಿಸಿದ ಪ್ರತಿಭಟನಾಕಾರರು

Kalaburagi 8 Jan 20
Published on

ಕಲಬುರಗಿ: ಭಾರತ್​ ಬಂದ್​ಗೆ ಬೆಂಬಲ ನೀಡದೆ ಎಂದಿನಂತೆ ತೆರೆದಿದ್ದ ಅಂಗಡಿಗಳನ್ನು ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಮುಚ್ಚಿಸುತ್ತಿದ್ದ ದೃಶ್ಯ ನಗರದಲ್ಲಿ ಕಂಡುಬಂತು.

ಅಂಗಡಿಗಳಿಗೆ ನುಗ್ಗಿದ ಪ್ರತಿಭಟನಾಕಾರರು ವಾಟರ್​ಪೌಚ್​ನಿಂದ ಹೊಡೆದು ದಾಂಧಲೆ ಮಾಡಿದ್ದಾರೆ ಎನ್ನಲಾಗಿದೆ. ನಗರದ ಸಿಟಿ ಸೆಂಟರ್​ ಮಾಲ್​ ಬಳಿಯ ಅಂಗಡಿಗಳನ್ನು, ಆಂಧ್ರ ಬ್ಯಾಂಕ್​​ನ್ನು ಹೋರಾಟಗಾರರು ಬಲವಂತವಾಗಿ ಬಂದ್​ ಮಾಡಿಸಿದ್ದಾರೆ.

ಹಾಗೇ ಕಾರ್ಮಿಕ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಿಎಎ, ಎನ್​ಆರ್​ಸಿ ಬಗ್ಗೆಯೂ ವಿರೋಧದ ಧ್ವನಿ ಕೇಳಿಬಂತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಪ್ರತಿಭಟನಾಕಾರರು ಪ್ರಧಾನಿ ಮೋದಿ ಹಾಗೂ ಅಮಿತ್​ ಷಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.( ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net