ನನಗೆ ಸೊಸೆಯಾಗಿ ಬರುವವಳು ಹೀಗಿರಬೇಕು; ಈ ವಿಚಾರದಲ್ಲಿ ಬೇಕಿದ್ದರೆ… ನಟಿ ಭಾಗ್ಯಶ್ರೀ ಹೇಳಿಕೆ ವೈರಲ್

Untitled-design-2024-08-13T174959.481
Published on

ಮುಂಬೈ: ಮೊದಲ ಸಿನಿಮಾದಲ್ಲೇ ಬಿಟೌನ್​ನಲ್ಲಿ ಸ್ಟಾರ್​ಪಟ್ಟ ಗಿಟ್ಟಿಸಿಕೊಂಡ ನಟಿ ಭಾಗ್ಯಶ್ರೀ. 1989ರಲ್ಲಿ ಬಿಡುಗಡೆಯಾದ ಮೈನೆ ಪ್ಯಾರ್​ ಕಿಯಾ ಸಿನಿಮಾದಲ್ಲಿ ಸಲ್ಮಾನ್​ಖಾನ್​ಗೆ ನಾಯಕಿ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಆದರೆ 19ನೇ ವಯಸ್ಸಿಗೆ ಮದುವೆಯಾಗಿ ಬಣ್ಣದ ಜಗತ್ತಿನ ಒಡನಾಟದಿಂದ ದೂರ ಉಳಿದರು.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರ ಮಗನ ವಿಚಾರವನ್ನು ಪ್ರಸ್ತಾಪಿಸಿದಾಗ ನಟಿ ಭಾಗ್ಯಶ್ರೀ ಬೋಲ್ಡ್​​ ಆಗಿ ಪ್ರತಿಕ್ರಿಯಿಸಿದ್ದಾರೆ. ನಾನು ಅವನ ಮದುವೆಯ ಬಗ್ಗೆ ಕಾತುರದಿಂದ ಕಾಯುತ್ತಿದ್ದೇನೆ. ಬೇಗ ಮದುವೆಯಾಗು ಎಂದು ಅವನಿಗೆ ಯಾವಾಗಲು ಹೇಳುತ್ತಿರುತ್ತೇನೆ. ಏಕೆಂದರೆ ಒಂದು ವಯಸ್ಸಿನಲ್ಲಿ ಜೀವನ ಸಂಗಾತಿಯೊಂದಿಗೆ ಆನಂದಿಸುವ ಕೆಲವು ವಿಷಯಗಳಿರುತ್ತವೆ. ಜೀವನ ಸಾಗುತ್ತಿರುತ್ತದೆ ಆ ವಯಸ್ಸು ಹಾಗೆಯೇ ಇರುವುದಿಲ್ಲ ಎಂದು ಹೇಳಿದರು. ಅಂದ್ಹಾಗೆ ಅವರ ಮಗ ಅಭಿಮನ್ಯು ದಸ್ಸಾನಿ 'ಮರ್ದ್ ಕೋ ದರ್ದ್ ನಹೀ ಹೋತಾ' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ.

ನಾನು ನನ್ನ ಮಗನ ಆಯ್ಕೆಯನ್ನು ಗೌರವಿಸುತ್ತೇನೆ. ಅವರ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಅವನಿಗೆ ಅವಕಾಶ ನೀಡಿದ್ದೇನೆ. ನನ್ನ ಆಯ್ಕೆಯನ್ನು ನಾನು ಅವನ ಮೇಲೆ ಹೇರುವುದಿಲ್ಲ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ರಾಜಿ ಮಾಡಿಕೊಳ್ಳಲು, ಹೊಂದಾಣಿಕೆ ಮಾಡಿಕೊಳ್ಳಲು ಸಿದ್ದರಾಗಿರುತ್ತೀರಿ. ಆದ್ದರಿಂದ ಅವನ ಜೀವನಸಂಗಾತಿಯ ವಿಚಾರ ಆತನಿಗೆ ಬಿಡಲಾಗಿದೆ ಎಂದು ತಿಳಿಸಿದರು. ನಿಮ್ಮ ಮಗ ಚಿತ್ರರಂಗದವರನ್ನೇ ಮದುವೆಯಾದರೆ ನಿಮಗೆ ಯಾವುದೇ ಆಕ್ಷೇಪಣೆ ಇಲ್ಲವೇ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಭಾಗ್ಯಶ್ರೀ, ಚಿತ್ರರಂಗದವರಾಗಿರಲಿ ಅಥವಾ ಚಿತ್ರರಂಗದ ಹೊರಗಿನವರಾಗಿರಲಿ, ಕೆಲಸ ಮಾಡುವ ಹುಡುಗಿಯೆಂದರೆ ನನಗಿಷ್ಟ ಎಂದಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net