ಜಿಲ್ಲೆಯಲ್ಲಿ ವಾಡಿಕೆಗಿಂತ ಉತ್ತಮ ಮಳೆ

Rain in mysore
Published on

ಮೈಸೂರು: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದು, ರೈತಾಪಿ ವರ್ಗದವರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈ ಬಾರಿ ಎಲ್ಲ ತಾಲೂಕುಗಳಲ್ಲೂ ಉತ್ತಮ ಮಳೆಯಾಗಿದೆ.

ಜಿಲ್ಲೆಯಲ್ಲಿ ಜೂನ್ 1 ರಿಂದ ಜುಲೈ 23ರವರೆಗೆ 263 ಮಿ.ಮೀ. (ವಾಡಿಕೆ ಮಳೆ 188 ಮಿ.ಮೀ.) ಮಳೆಯಾಗಿದೆ. ಎಚ್.ಡಿ. ಕೋಟೆ, ಸರಗೂರು ಹಾಗೂ ಪಿರಿಯಾಪಟ್ಟಣ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದು, ತಿ.ನರಸೀಪುರ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಸುರಿದಿದೆ.

ಎಚ್.ಡಿ. ಕೋಟೆ ತಾಲೂಕಿನಲ್ಲಿ ಜೂ.1 ರಿಂದ ಜು.23ರವರೆಗೆ 402 ಮಿ.ಮೀ. (ವಾಡಿಕೆ ಮಳೆ 203.3 ಮಿ.ಮೀ.), ಪಿರಿಯಾಪಟ್ಟಣ ತಾಲೂಕಿನಲ್ಲಿ 343.5 (216.4) ಮಿ.ಮೀ., ಸರಗೂರು ತಾಲೂಕಿನಲ್ಲಿ 319.9 (243.8) ಮಿ.ಮೀ., ಹುಣಸೂರು ತಾಲೂಕಿನಲ್ಲಿ 265 (163.4) ಮಿ.ಮೀ., ಸಾಲಿಗ್ರಾಮ ತಾಲೂಕಿನಲ್ಲಿ 258.5 (115.1) ಮಿ.ಮೀ., ನಂಜನಗೂಡು ತಾಲೂಕಿನಲ್ಲಿ 184 (117.6) ಮಿ.ಮೀ., ಮೈಸೂರು ತಾಲೂಕಿನಲ್ಲಿ 178.9 (136.1) ಮಿ.ಮೀ., ಕೆ.ಆರ್. ನಗರ ತಾಲೂಕಿನಲ್ಲಿ 178.4 (128.2) ಮಿ.ಮೀ., ತಿ.ನರಸೀಪುರ ತಾಲೂಕಿನಲ್ಲಿ 143 (118.4) ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net