ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ

20sor2
ಸೊರಬದ ಜ್ಞಾನಸಹ್ಯಾದ್ರಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ತಾಲೂಕು ಮಟ್ಟದ ಯೋಗ ಹಾಗೂ ಚೆಸ್ ಕ್ರೀಡಾಕೂಟವನ್ನು ಬಿಇಒ ಆರ್.ಪುಷ್ಪಾ ಉದ್ಘಾಟಿಸಿದರು. ರಾಜೇಶ್ ರಂಜಿತ್, ನಾಗರಾಜ್ ನಾಯ್ಕ, ಶ್ರೀಕಾಂತ್ ಇತರರಿದ್ದರು.
Published on

ಸೊರಬ: ದೈಹಿಕ ಸದೃಢತೆ ಹೊಂದಿದ ವ್ಯಕ್ತಿಯು ಮಾನಸಿಕ ಮತ್ತು ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ಬಿಇಒ ಆರ್.ಪುಷ್ಪಾ ಹೇಳಿದರು.

ಪಟ್ಟಣದ ಜ್ಞಾನ ಸಹ್ಯಾದ್ರಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಯೋಗ ಹಾಗೂ ಚೆಸ್ ಕ್ರೀಡಾಕೂಟದಲ್ಲಿ ಮಾತನಾಡಿ, ಪ್ರತಿ ದಿನ ಯೋಗಾಭ್ಯಾಸ ರೂಢಿಸಿಕೊಂಡರೆ ಉತ್ತಮ ಆರೋಗ್ಯ ಹೊಂದಲು ಸಹಾಯವಾಗುತ್ತದೆ. ಚೆಸ್ ಅಭ್ಯಾಸದಿಂದ ಬುದ್ದಿಶಕ್ತಿ ಚುರುಕಾಗುತ್ತದೆ. ಹಾಗಾಗಿ ಮಕ್ಕಳು ಓದಿನ ಜತೆಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಮೇಜರ್ ರಾಜೇಶ್ ರಂಜಿತ್ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳವಿಕೆ ಬಹಳ ಮುಖ್ಯ ಎಂದರು. ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಪ್ರಕಾಶ್, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಅಂಜನಪ್ಪ, ಶಾಲಾ ಆಡಳಿತಾಧಿಕಾರಿ ನಾಗರಾಜ್ ನಾಯ್ಕ, ಶ್ರೀಕಾಂತ್, ಕೆ.ಪಿ.ಮೋಹನ್ ಕುಮಾರ್, ಜಿ.ರಾಜಪ್ಪ, ತಾಲೂಕು ಕ್ರೀಡಾ ಅಧೀಕ್ಷಕ ಲಿಂಗರಾಜ್ ಒಡೆಯರ್, ಇಸಿಒ ಅರುಣ್‌ಕುಮಾರ್, ಪ್ರಾಣೇಶ್, ರಘುಪತಿ, ಧರ್ಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net