ಫೆ.10ರಂದು ಬೆಟ್ಟದಪುರದಲ್ಲಿ ಬ್ರಹ್ಮರಥೋತ್ಸವ

IMG-20200116-WA0031
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಫೆ.9ರಂದು ಶ್ರೀ ಶಿಡ್ಲುಮಲ್ಲಿಕಾರ್ಜುನಸ್ವಾಮಿಯ ಗಿರಿಜಾ ಕಲ್ಯಾಣೋತ್ಸವ ಹಾಗೂ ಫೆ.10ರಂದು ಬ್ರಹ್ಮರಥೋತ್ಸವ ನಡೆಯಲಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಉಪವಿಭಾಗಾಧಿಕಾರಿ ಬಿ.ಎನ್.ವೀಣಾ ಅಧಿಕಾರಿಗಳಿಗೆ ಸೂಚಿಸಿದರು.

ಜಾತ್ರೆ ಹಿನ್ನೆಲೆ ಶುಕ್ರವಾರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜ.27ರಂದು ದನಗಳ ಜಾತ್ರೆಯ ಹರಾಜು ಪ್ರಕ್ರಿಯೆ ನಡೆಯಲಿದೆ. ಜಾತ್ರೆಗೆ ಬರುವ ಜಾನುವಾರುಗಳು ಮತ್ತು ಭಕ್ತರ ಆರೋಗ್ಯ ಕಾಳಜಿ ಹಿನ್ನೆಲೆ ಆರೋಗ್ಯ ಇಲಾಖೆ ಹೆಚ್ಚುವರಿ ಕ್ಯಾಂಪ್‌ಗಳನ್ನು ನಡೆಸಬೇಕು. ಬೆಟ್ಟಕ್ಕೆ ಹತ್ತುವಾಗ ನೂಕುನುಗ್ಗಲಾಗದಂತೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಸೆಸ್ಕ್‌ನವರು ಬೆಟ್ಟ ಹಾಗೂ ದೇವಸ್ಥಾನಕ್ಕೆ ಆಕರ್ಷಕವಾಗಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು ಹಾಗೂ ಗ್ರಾಮದಲ್ಲಿ ಸ್ವಚ್ಛತೆ ನಿರ್ವಹಿಸಬೇಕು. ಗ್ರಾಮದ ರಸ್ತೆ ಹಾಗೂ ಬೆಟ್ಟದ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಪಿಡಬ್ಲುೃಡಿ ಕ್ರಮ ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ, ಉಪಾಧ್ಯಕ್ಷೆ ಗೀತಾ, ತಾಲೂಕು ಪಂಚಾಯಿತಿ ಸದಸ್ಯ ಕುಂಜಪ್ಪ ಕಾರ್ನಡ್, ಗ್ರಾಪಂ ಸದಸ್ಯ ರಾಜಶೇಖರ್, ರೈತ ಸಂಘದ ದೇವರಾಜ್, ಮುಖಂಡರಾದ ನೀಲಯ್ಯ, ಶಿವರಾಜು, ಕುಮಾರ್, ರಾಜಣ್ಣ, ಮಹೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net