

ನಾಪೋಕ್ಲು: ಇಲ್ಲಿಯ ಜನರಲ್ ತಿಮ್ಮಯ್ಯ ಆಟದ ಮೈದಾನ ಚರಿಯ ಪರಂಬುನಲ್ಲಿ ನಡೆದ ವಲಯ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟದಲ್ಲಿ ಆಕ್ಸ್ಫರ್ಡ್ ಶಾಲೆ ಕುಂಜಿಲ ಶಾಲೆಯನ್ನು ಫೈನಲ್‌ನಲ್ಲಿ 3-0 ಅಂತರದಲ್ಲಿ ಗೋಲು ಬಾರಿಸಿ ಪಂದ್ಯವನ್ನು ಗೆದ್ದು ಬೇತು ಗ್ರಾಮದ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಿಂದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಎಂ.ಎಸ್ ಶಹಿಂ, 3,000 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಬಿ.ಆರ್ ರೋಹನ್ ರೈ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿಭಾಗದಿಂದ ಜಿಯಾ ಫಾತಿಮಾ 6ನೇ ತರಗತಿ ಈ ವಿದ್ಯಾರ್ಥಿನಿ ಚದುರಂಗದಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ . ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಂತಸ ವ್ಯಕ್ತಪಡಿಸಿದೆ.