25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂ ಎಇ ಲೋಕಾಯುಕ್ತ ಬಲೆಗೆ

bescome bribe
Published on

ಬೆಂಗಳೂರು: ಮನೆಯ ಆವರಣದಲ್ಲಿದ್ದ ವಿದ್ಯುತ್ ಕಂಬ ತೆರವು ಮಾಡುವ ಸಲುವಾಗಿ 25 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಕಸ್ತೂರಿನಗರ ಕಾರ್ಯಾಚರಣೆ ಮತ್ತು ನಿರ್ವಹಣೆ ಉಪ‌ವಿಭಾಗದ ಸಹಾಯಕ ಎಂಜಿನಿಯರ್ ವಿದ್ಯಾ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಬೆಸ್ಕಾಂ ಕಸ್ತೂರಿನಗರ ಕಚೇರಿ ವ್ಯಾಪ್ತಿಯಲ್ಲಿ ಮನೆಯೊಂದರ ಆವರಣದಲ್ಲಿದ್ದ ವಿದ್ಯುತ್ ಕಂಬ ಸ್ಥಳಾಂತರ ಕಾಮಗಾರಿ ನಡೆಯುತ್ತಿತ್ತು. ನಾರಾಯಣಪುರ ನಿವಾಸಿ ಅರವಿಂದ್ ಎಂಬ ಎಲೆಕ್ಟ್ರಿಕಲ್ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕಿತ್ತು. ಅವರು ಕಚೇರಿಯನ್ನು ಸಂಪರ್ಕಿಸಿದ್ದಾಗ ಕಾರ್ಯಾದೇಶ ನೀಡಲು 25,000 ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು.

ಸಹಾಯಕ ಎಂಜಿನಿಯರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಲೋಕಾಯುಕ್ತದ ಬೆಂಗಳೂರು ನಗರ‌ ಪೊಲೀಸ್ ಘಟಕಕ್ಕೆ ಅರವಿಂದ್ ದೂರು ನೀಡಿದ್ದರು. ಬುಧವಾರ ಕಸ್ತೂರಿನಗರದ ಬೆಸ್ಕಾಂ ಕಚೇರಿಯಲ್ಲೇ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಲೋಕಾಯುಕ್ತ ಡಿವೈಎಸ್​​ಪಿ ಉಮಾದೇವಿ ಆರ್. ಮತ್ತು ತಂಡ ಆರೋಪಿ ವಿದ್ಯಾ ಅವರನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net