ಬೆಸ್ಕಾಂ ಎಇಇ ಬಂಧನ

karnataka-lokayukta
Published on

ಬೆಂಗಳೂರು : 80 ಸಾವಿರೂ. ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಸ್ಕಾಂನ ಇ-೯ ಉಪವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿರುವ ನವೀನ್ ಕುಮಾರ್ ಬಂಧಿತ.
ನಾಗವಾರ ವ್ಯಾಪ್ತಿಯ ಥಣಿಸಂದ್ರದ ಕಾರ್ಯಪಾಲನೆ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನವೀನ್ ಕುಮಾರ್, ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಲು ಚಂದನ್ ಕುಮಾರ್ ಎಂಬುವವರಿಂದ ೮೦ ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಚಂದನ್ ಕುಮಾರ್ ನೀಡಿದ್ದ ದೂರಿನನ್ವಯ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು, ಬುಧವಾರ ಸಂಜೆ ೮೦ ಸಾವಿರ ರೂ. ಲಂಚ ಸ್ವೀಕಾರಿಸುತ್ತಿದ್ದಾಗಲೇ ಆರೋಪಿ ನವೀನ್ ಕುಮಾರ್ ಅವರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net