ಸಂವಿಧಾನ ಅರ್ಥೈಸಿಕೊಂಡರೆ ಸುಖಿ ಸಮಾಜ: ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ಅಭಿಪ್ರಾಯ,ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧನೆ

26-klr-8
Published on

ಕೋಲಾರ : ವಿಶ್ವದಲ್ಲೇ ಅತಿ ಶ್ರೇಷ್ಟವಾದ ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಮುನ್ನಡೆದರೆ ಸುಖಿ ಸಮಾಜ, ಸಮೃದ್ದ ದೇಶ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ಹೇಳಿದರು.

ನಗರದ ಕಚೇರಿಯಲ್ಲಿ ಶುಕ್ರವಾರ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಿಬ್ಬಂದಿಗೆ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ದೇಶದಲ್ಲಿ ಸಂವಿಧಾನ ರಚನೆಯಾದ ಮೇಲೆ ಅಂಗೀಕಾರ ಮಾಡಲು ಸುಮಾರು ವರ್ಷಗಳೇ ಬೇಕಾಯಿತು. ದೇಶದಲ್ಲಿ ಸಂವಿಧಾನಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಹಿಂದೆ ಸಂಸತ್, ವಿಧಾನ ಸಭೆಗಳಲ್ಲಿ ಏನೇ ತೀರ್ಮಾನ ತೆಗೆದುಕೊಂಡರೂ ಸಂವಿಧಾನದ ಆಧಾರದ ಮೇಲಿರುತ್ತಿದ್ದವು ಎಂದರು.

ಅಂಬೇಡ್ಕರ್ ನೇತೃತ್ವದ ತಂಡವೂ ಮುಂದಾಲೋಚನೆ ಇಟ್ಟುಕೊಂಡು ಸಂವಿಧಾನ ರಚಿಸಿದೆ. ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿಹೊಂದಲು ಸಂವಿಧಾನ ಪೂರಕವಾಗಿದೆ ಎಂದರು.

ಭಾರತವನ್ನು ಅರ್ಥ ಮಾಡಿಕೊಳ್ಳದೆ ಸಂವಿಧಾನ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ, ದೇಶ, ಜನ, ಮೂಲ, ಸಂಬಂಧ, ಸಂಸ್ಕೃತಿ ತಿಳಿಯಬೇಕು ಎಂದರು.

ಕಚೇರಿ ವ್ಯವಸ್ಥಾಪಕ ಮುನಿಸ್ವಾಮಿಗೌಡ, ಅಧೀಕ್ಷಕರಾದ ಗಿರೀಶ್‌ಕುಮಾರ್, ಬಿಂದು, ಶಿಕ್ಷಣ ಸಂಯೋಜಕರಾದ ಮುನಿರತ್ನಯ್ಯಶೆಟ್ಟಿ, ರಾಘವೇಂದ್ರ,ಆರ್.ಶ್ರೀನಿವಾಸನ್, ಬೈರೆಡ್ಡಿ, ಕಚೇರಿ ಸಿಬ್ಬಂದಿ ಶ್ರೀನಿವಾಸಮೂರ್ತಿ, ಜಯಶಂಕರ್ ಪ್ರಸಾದ್, ಸುದರ್ಶನ್, ಸುಬ್ರಮಣಿ, ವಿನಯ್, ಯಲ್ಲಮ್ಮ, ಸವಿತಾ ಹಾಜರಿದ್ದರು.

ಅರಾಭಿಕೊತ್ತನೂರು: ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಂವಿಧಾನ ಸಮರ್ಪಣಾ ದಿನವನ್ನು ಸಂವಿಧಾನದ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಆಚರಿಸಲಾಯಿತು.ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಸಂವಿಧಾನದ ಮಹತ್ವದ ಕುರಿತು ಮಾತನಾಡಿದರು. ಶಿಕ್ಷಕ ಸಚ್ಚಿದಾನಂದ ಮೂರ್ತಿ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಭವಾನಿ, ಶ್ವೇತಾ, ಸುಗಣಾ, ಲೀಲಾ, ಸಿದ್ದೇಶ್ವರಿ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net