

ಸಣ್ಣ ಕೊಠಡಿಯೊಂದರಲ್ಲಿ ಆರಂಭವಾದ ಕಂಪನಿಗಳು ಇಂದು ಜಾಗತಿಕ ಮಟ್ಟದಲ್ಲಿ ಬೆಳೆದಿರುವುದನ್ನು ನೋಡಿದ್ದೇವೆ. ಹಾಗೆಯೇ ಕಂಪನಿ ಆರಂಭ ಮಾಡುವುದಕ್ಕಿಂತ ಮೊದಲು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಹಗಲೂರಾತ್ರಿ ಶ್ರಮವಹಿಸಿ ಉನ್ನತ ಹುದ್ದೆಗೇರಿರುವ ವ್ಯಕ್ತಿಗಳನ್ನೂ ನೋಡಿದ್ದೇವೆ. ಈ ಎರಡೂ ಮಾತಿಗೆ ಹೋಲುವ ಮತ್ತು ತಕ್ಕದಾದ ಹೆಸರೆಂದರೆ ಭಾರತ್ ಅಲು ಫಾಮ್್ಸರ್ ಸಂಸ್ಥೆ ಮತ್ತು ಅದರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿರುವ (ಸಿಇಒ) ಸಂದೇಶ ಕುಲಕರ್ಣಿ. ಕಾರವಾರದಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ಹಲವು ಕನಸುಗಳೊಂದಿಗೆ 2014ರಲ್ಲಿ ಬೆಂಗಳೂರಿಗೆ ಬಂದ ಸಂದೇಶ ಅವರಿಗೆ ಆರಂಭದಲ್ಲಿ ತಮ್ಮ ಕನಸುಗಳನ್ನು ಸುಲಭವಾಗಿ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೆ, ಕ್ಯಾಬ್ ಚಾಲಕನಾಗಿ ದುಡಿಯುತ್ತ, ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡುತ್ತ ಹಂತ ಹಂತವಾಗಿ ಕಟ್ಟಿದ ಕಂಪನಿ ಇಂದು 250 ಕೋಟಿ ರೂ. ಮೌಲ್ಯ ಹೊಂದಿದೆ ಎಂದರೆ ನೀವು ನಂಬಲೇಬೇಕು. ಅವರಿಗೆ ‘ವಿಜಯವಾಣಿ’, ಬೆಂಗಳೂರು ರತ್ನ ಪ್ರಶಸ್ತಿ ಮೂಲಕ ಗೌರವಿಸಿದೆ.
ದೇಶದಲ್ಲಿ ನಂ. 1, ರಾಜ್ಯದಲ್ಲಿ ಪ್ರತಿಸ್ಪರ್ಧಿಗಳೇ ಇಲ್ಲ:
ದೊಡ್ಡ ಕಟ್ಟಡಗಳು, ವಿಲ್ಲಾಗಳ ನಿರ್ವಣದಲ್ಲಿ ನಮ್ಮ ಉಪಕರಣಗಳನ್ನು ಬಳಸಲಾಗುತ್ತದೆ. ಜಿ36, 40, ರಾಜೀವ್ ಗಾಂಧಿ ಆವಾಸ್ ಯೋಜನೆ, ಇಂದಿರಾ ಆವಾಸ್ ಯೋಜನೆ, ಬಸವ ಆವಾಸ್ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆಗಳಲ್ಲಿ ಈ ಉಪಕರಣಗಳನ್ನು ಬಳಸುತ್ತಾರೆ. ದೇಶದ ವಿವಿಧ 20-30 ಕಂಪನಿಗಳು ಈ ಸರ್ವೀಸ್ ನೀಡುತ್ತಿವೆ. ಆದರೆ, ರಾಜ್ಯದಲ್ಲಿ ಯಾವೊಬ್ಬ ಪ್ರತಿಸ್ಪರ್ಧಿಗಳಿಲ್ಲ. ಕರ್ನಾಟಕದಲ್ಲಿ ಸರ್ವೀಸ್ ನೀಡುತ್ತಿರುವ ಏಕೈಕ ಸಂಸ್ಥೆಯಾಗಿದೆ. ನಮಗೆ ವಿವಿಧ 4 ಬಿಜಿನೆಸ್ ಇರುವುದರಿಂದ ನಮ್ಮ ಸಂಸ್ಥೆಯು ಯಶಸ್ಸಿನತ್ತ ಸಾಗುತ್ತಿದೆ ಎಂಬುದು ಸಂದೇಶ ಕುಲಕರ್ಣಿ ನುಡಿ.
ಮೇ 12, 2016ರಲ್ಲಿ ಭಾರತ್ ಅಲು ಫಾಮ್್ಸರ್ ಹೆಸರಿನ ಕಂಪನಿಯನ್ನು ಸಂಪಿಗೆ ರಸ್ತೆಯಲ್ಲಿರುವ ಮಿಲ್ಕ್ ಕಾಲನಿ ಚಿಕ್ಕ ಕೊಠಡಿಯಲ್ಲಿದ್ದುಕೊಂಡು ಸಂಸ್ಥೆ ಆರಂಭಿಸಲಾಯಿತು. ಬಳಿಕ ಕಂಪನಿ ಕಟ್ಟುವ ವೇಳೆ ಆರ್ಥಿಕವಾಗಿ ಗಟ್ಟಿಯಾಗಲು ರಾತ್ರಿ ವೇಳೆ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿ ಹಣ ಸಂಪಾದಿಸಿ ಜೀವನ ನಿರ್ವಹಣೆ ಮಾಡಿದ್ದಾರೆ. ಬಹಳಷ್ಟು ಸಲ ಇಂದಿರಾ ಕ್ಯಾಂಟೀನ್ ಊಟ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಗೆಳೆಯ ಶರಣಬಸಪ್ಪ ದಾವಣಗೆರೆ ಮತ್ತು ಗಿರೀಶ್ ಬಿ.ಪಿ. ಅವರು ಸಹಾಯ ಮಾಡಿ, ವಿವಿಧ ಕಂಪನಿಗಳ ಭೇಟಿಗೆ ದೆಹಲಿ, ಮುಂಬೈಗೆ ಏರ್ ಟಿಕೆಟ್ ಮಾಡಿಸಿ ಸಹಾಯ ಮಾಡಿದ್ದರು. ಕಂಪನಿ ನಿರ್ವಣಕ್ಕೂ ಪಾಲುದಾರರಾಗಿ ಸಹಾಯ ಮಾಡಿದ್ದರು. ಇದೆಲ್ಲದರ ಪರಿಣಾಮ ಇಂದು 250 ಕೋಟಿ ರೂ. ಮೌಲ್ಯದ ಭಾರತ್ ಅಲು ಫಾಮ್್ಸರ್ ದೇಶಾದ್ಯಂತ ರಾರಾಜಿಸುತ್ತಿದೆ. ಇದರ ಸಿಇಒ ಸಂದೇಶ ಕುಲಕರ್ಣಿ. ಬೆಂಗಳೂರು, ಹೈದರಾಬಾದ್, ಮುಂಬೈ, ಕೋಲ್ಕತ್ತ, ದೆಹಲಿಯಂತಹ ಮಹಾನಗರಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಅಪಾರ್ಟ್ವೆುಂಟ್ಗಳು, ವಿಲ್ಲಾಗಳು, ಜಿ+30, ಜಿ+40ಯಂತಹ ಕಟ್ಟಡಗಳು, ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗಾಗಿ ನಿರ್ವಿುಸಿಕೊಡುವ ಇಂದಿರಾ ಆವಾಸ್ ಯೋಜನೆ, ರಾಜೀವ್ ಗಾಂಧಿ ಆವಾಸ್ ಯೋಜನೆ, ಬಸವ ಆವಾಸ್ ಯೋಜನೆಗಳು ಸೇರಿ ವಿವಿಧ ಕಟ್ಟಡಗಳನ್ನು ನಿರ್ವಿುಸಲು ಅಲ್ಯೂಮಿನಿಯಮ್ ಫಾಮ್್ಸರ್ ಅನ್ನು ಬಳಸುತ್ತಾರೆ. ಇಂತಹ ಕಟ್ಟಡಗಳನ್ನು ತುಂಬ ವೇಗವಾಗಿ ನಿರ್ವಿುಸಲು ಗೋಡೆ ಮತ್ತು ಸೆಂಟ್ರಿಂಗ್ ಮಾಡಲು ಬಳಸುವ ಅಲ್ಯೂಮಿನಿಯಂ ಪ್ಯಾನಲ್ಸ್, ಸಪೋರ್ಟಿಂಗ್ ಮೆಟೀರಿಯಲ್ಸ್, ಅದಕ್ಕೆ ಬೇಕಾದ ಬಿಡಿಭಾಗಗಳನ್ನು ಈ ಸಂಸ್ಥೆಯು ಒದಗಿಸಲಿದೆ.
ಕಂಪನಿಯ ವಿಶೇಷವೇನು?: ವಿಶೇಷ ರೀತಿಯ ಮ್ಯಾನುಫ್ಯಾಕ್ಚರಿಂಗ್ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವುದು ಭಾರತ್ ಅಲು ಫಾಮ್್ಸರ್ ವಿಶೇಷತೆಯಾಗಿದೆ. ದೇಶದಲ್ಲಿ ಅತಿ ದೊಡ್ಡ ನಿರ್ಮಾಣ ಮತ್ತು ತಯಾರಿಕೆ ಘಟಕಗಳಿವೆ. ಆದರೆ, ಈ ಎರಡೂ ಮಾದರಿಯ ಕೆಲಸಗಳನ್ನು ಮಾಡುವ ಕಂಪನಿಗಳು ದೇಶದಲ್ಲಿ ಎಲ್ಲಿಯೂ ಇಲ್ಲ. ಈ ಎರಡೂ ಸರ್ವೀಸ್ಗಳನ್ನು ನೀಡುತ್ತಿರುವುದರಿಂದ ಕಂಪನಿಯ ಬಹಳಷ್ಟು ಬೇಡಿಕೆ ಹೊಂದಿದೆ. ಪ್ರತಿ ದಿನ ಕನಿಷ್ಠ 4-5 ಕ್ಲೈಂಟ್ಗಳು ಕಂಪನಿಯನ್ನು ಭೇಟಿ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕಂಪನಿಯ ಮೌಲ್ಯವು ಎತ್ತರಕ್ಕೆ ಸಾಗುತ್ತಿದೆ. ಸಂಸ್ಥೆಯಲ್ಲಿನ ಯುವ ಮತ್ತು ಉತ್ಸಾಹಿ ತಂಡ ಇರುವುದು ಕೂಡ ಸಂಸ್ಥೆಯ ವಿಶೇಷತೆಯಾಗಿದೆ. ನಿರ್ದೇಶಕ ಹುದ್ದೆಯಿಂದ ಕೊನೆಯ ಹಂತದ ಕೆಲಸದವರೆಗೂ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಹಿಳಾ ಸಬಲೀಕರಣಕ್ಕೂ ಒತ್ತು ನೀಡಲಾಗಿದೆ.
ಕಂಪನಿಯೊಂದು, ಸೇವೆ ಹಲವು: ‘ಸ್ವಾಭಿಮಾನಿ ಭಾರತ್ ಡಿಸೈನ್ ಆಂಡ್ ಅಲು ಫಾಮ್್ಸರ್ ಎಲ್ಎಲ್ಪಿ’ ಕಂಪನಿಯನ್ನು 2016ರಲ್ಲಿ ಆರಂಭಿಸಲಾಯಿತು. ಅದಾದ ನಂತರ ಕಟ್ಟಡ ನಿರ್ವಣಕ್ಕೆ ಸಂಬಂಧಿಸಿದ ಸೇವೆಯನ್ನು ನೀಡಲು ‘ಸ್ವಾಭಿಮಾನಿ ಭಾರತ್ ಕನ್ಸ್ಟ್ರಕ್ಷನ್ ಪ್ರೖೆ.ಲಿ.’ ಅನ್ನು ಪ್ರಾರಂಭಿಸಿತು. ಬಳಿಕ ಫರ್ನೀಚರ್ಗಳ ಸೇವೆಯನ್ನು ನೀಡಲು ‘ಪೀಠೋಪಕರಣ’ ಎಂಬ ಹೆಸರಿನಲ್ಲಿ ಕಂಪನಿ ಶುರು ಮಾಡಲಾಯಿತು. ಭಾರತ್ ಅಲು ಫಾಮ್್ಸರ್ ಸೇರಿ ಒಟ್ಟು 4 ಕಂಪನಿಗಳು ಕಟ್ಟಡ ನಿರ್ವಣಕ್ಕೆ ಸಂಬಂಧಿಸಿದ ಸೇವೆಗಳನ್ನು ನೀಡುತ್ತಿದೆ. ದೊಡ್ಡ ಬಿಲ್ಡರ್ಗಳಿಗೆ ಒಂದೇ ಸೂರಿನಡಿ ಎಲ್ಲ ಸೇವೆಗಳು ಕೂಡ ದೊರೆಯಲಿವೆ. ಈ ಕಾರಣದಿಂದ ಕ್ಲೈಂಟ್ಗಳ ಸಂಖ್ಯೆ ಮತ್ತು ಉದ್ಯಮ ಕೂಡ ಏರುಗತಿಯಲ್ಲಿ ಸಾಗುತ್ತಿದೆ.
ಕಂಪನಿಯನ್ನು ಶೂನ್ಯದಿಂದ ಮೇಲ್ಮಟ್ಟಕ್ಕೆ ಬೆಳೆಸಿದ ಸಾಹಸಿ
ನನಗೆ ಬೆಂಗಳೂರು ರತ್ನ ಅರಸಿಬಂದಿರುವುದು ಆಶ್ಚರ್ಯ ತಂದಿದೆ. ಅತಿ ಕಡಿಮೆ ಅವಧಿಯಲ್ಲಿ ಪ್ರತಿಷ್ಠಿತ ‘ವಿಜಯವಾಣಿ’ ಸಂಸ್ಥೆಯು ನನ್ನನ್ನು ಗುರುತಿಸಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಬೇಕೆಂಬ ಹುಮ್ಮಸ್ಸು ಜಾಸ್ತಿಯಾಗಿದೆ. ನನಗೆ ಮಾತ್ರವಲ್ಲ, ಪ್ರಶಸ್ತಿ ಪಡೆದಿರುವವರಿಗೆಲ್ಲ ಇದು ಸಂತಸದ ಸಂದರ್ಭ.
| ಸಂದೇಶ ಕುಲಕರ್ಣಿ, ಸ್ವಾಭಿಮಾನಿ ಭಾರತ ಡಿಸೈನ್ ಆಂಡ್ ಅಲು ಫಾರ್ಮ್ಸ್ ಸಿಇಒಸರ್ಕಾರಿ ಕಾಲೇಜಿನ ಪ್ರತಿಭೆ:
ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತಿಲ್ಲ ಎನ್ನುವವರಿಗೆ ಸಂದೇಶ ಮಾದರಿಯಾಗಿದ್ದಾರೆ. ಒಂದನೇ ತರಗತಿಯಿಂದ ಇಂಜಿನಿಯರಿಂಗ್ ಪದವಿವರೆಗೂ ಸರ್ಕಾರಿ ಸಂಸ್ಥೆಗಳಲ್ಲಿಯೇ ವ್ಯಾಸಂಗ ಮಾಡಿದ್ದಾರೆ. 2008ರಲ್ಲಿ ಡಿಪ್ಲೊಮಾ ಮುಗಿಸಿ 2010ರಿಂದ 13ರವರೆಗೆ ಸಿವಿಲ್ ಇಂಜಿನಿಯರಿಂಗ್ (ಲ್ಯಾಟರಲ್ ಎಂಟ್ರಿ) ಮುಗಿಸಿದ್ದಾರೆ. ತಂದೆ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಇಂದು ನೂರಾರು ಕೋಟಿ ರೂ. ಮೊತ್ತದ ಸಂಸ್ಥೆಯ ಸಿಇಒ ಆಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ನನ್ನೆಲ್ಲ ಬೆಳವಣಿಗೆಗೆ ತಂದೆಯವರ ಮಾರ್ಗದರ್ಶನ ಮತ್ತು ಹೈಸ್ಕೂಲ್ನಲ್ಲಿ ಗುರುಗಳಾದ ರಾಜೇಶ್ ಶೇಣ್ವಿ ಹಾಗೂ ಗೋಪಾಲಕೃಷ್ಣ ಭಟ್, ಇಂಜಿನಿಯರಿಂಗ್ನಲ್ಲಿ ಶಾಂತಲಾ ಬಿ. ಪ್ರಮುಖ ಪಾತ್ರ ವಹಿಸುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳು ಮತ್ತು ಆವಿಷ್ಕಾರಗಳನ್ನು ತಿಳಿಸಿಕೊಟ್ಟಿದ್ದರಿಂದ ಸಾಧನೆ ಸಾಧ್ಯವಾಯಿತು ಎಂದು ಗುರುಗಳನ್ನು ಸ್ಮರಿಸಿದರು ಸಂದೇಶ ಕುಲಕರ್ಣಿ. ನನ್ನ ಚಿಕ್ಕಪ್ಪ ನಂದಕುಮಾರ ಕುಲಕರ್ಣಿ, ಚಿಕ್ಕಮ್ಮ ಜ್ಯೋತಿ ಅವರುಗಳು ಎಲ್ಲ ಹಂತದಲ್ಲೂ ನನಗೆ ಸಹಾಯ ಮಾಡಿದ್ದನ್ನು ನೆನೆಯಬೇಕು ಎಂಬುದು ಸಂದೇಶ ಅವರ ಹೆಮ್ಮೆಯ ಹೇಳಿಕೆ.
2014ರಲ್ಲಿ ಸಂದೇಶ ಅವರು ಬಿಡಿಎ ವತಿಯಿಂದ ನಿರ್ವಿುಸುತ್ತಿರುವ ಕೊಮ್ಮಘಟ್ಟ ವಸತಿ ಸಂಕೀರ್ಣದ ಪ್ರಾಜೆಕ್ಟ್ನಲ್ಲಿಯೂ ಕಾರ್ಯನಿರ್ವಹಿಸಿದ್ದರು. ಅಲ್ಯೂನಿಮಿನಿಯಂ ಫಾಮ್್ಸರ್ ಬಗ್ಗೆ ಆಲೋಚನೆ ಬಂದಿದ್ದು ಇದೇ ಯೋಜನೆಯಲ್ಲಿ. ಇಲ್ಲಿ ಟೆಕ್ನಿಕಲ್ ಸರ್ವೀಸ್ ನೀಡುವವರು ಯಾರೂ ಇರಲಿಲ್ಲ. ವಿದೇಶಗಳಿಂದ ಫಾರ್ಮ್ಸ್ ತರಿಸುತ್ತಿದ್ದರಿಂದ ಬಿಜಿನೆಸ್ ಆಲೋಚನೆ ಹುಟ್ಟಿಕೊಂಡಿತು ಎನ್ನುತ್ತಾರೆ.
ವಿವೇಕಾನಂದ ಅನುಯಾಯಿ:
ಬಾಲ್ಯದಿಂದಲೂ ನಾನು ಸ್ವಾಮಿ ವಿವೇಕಾನಂದ ಅನುಯಾಯಿಯಾಗಿದ್ದೇನೆ. ರಾಜಾಜಿನಗರದ ವಿವೇಕಾನಂದ ಕಾಲೇಜು ಮುಂಭಾಗ ಕುಳಿತು ಕಂಪನಿಗೆ ಏನು ಹೆಸರಿಡಬೇಕೆಂದು ಚರ್ಚೆಸುತ್ತಿದ್ದೆ. ಅದೇ ವೇಳೆ ದೇಶದಲ್ಲಿ ಚೀನಾ ವಸ್ತುಗಳ ಬಳಕೆ ಮಾಡದಂತೆ ಹೋರಾಟ ನಡೆಯುತ್ತಿತ್ತು. ಆಗ ನಮಗೆ ಹೊಳೆದಿದ್ದೇ ‘ಸ್ವಾಭಿಮಾನಿ’ ಹೆಸರು. ದೇಶದ ಜಿಡಿಪಿಗೆ ಕನಿಷ್ಠ ಶೇ. 0.00001 ನಮ್ಮ ಸಂಸ್ಥೆಯಿಂದ ಕೊಡುಗೆ ನೀಡಬೇಕೆಂಬ ಕನಸು ನಮ್ಮಲ್ಲಿ ಚಿಗುರೊಡೆಯಿತು. ಇಂದು ನಮ್ಮ ಗುರಿಯನ್ನು ಸಾಧಿಸಿ ಇನ್ನೂ ಮುಂದೆ ಸಾಗಿದ್ದೇವೆ. ಈಗ ನಮ್ಮೆಲ್ಲ ನಾಲ್ಕೂ ಸಂಸ್ಥೆಗಳಿಂದ ಶೇ.0.1 ನೀಡುತ್ತಿ ದ್ದೇವೆ. ಇದನ್ನು ಮತ್ತಷ್ಟು ನೀಡಬೇಕೆಂಬುದು ಗುರಿ ಹೊಂದಿದ್ದಾರೆ ಸಂದೇಶ.
ಸಂಸ್ಥೆಯು ಸುಪ್ರಭ ಎಂಬ ಅನಾಥ ಆಶ್ರಮ ಮತ್ತು ಇಸ್ಕಾನ್ಗೆ ಮಾಸಿಕ ಇಂತಿಷ್ಟು ದೇಣಿಗೆ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ 250 ಸಿಬ್ಬಂದಿ ಮತ್ತು 600ಕ್ಕೂ ಹೆಚ್ಚಿನ ಕಾರ್ವಿುಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬ ಸಿಬ್ಬಂದಿಯ ಇಬ್ಬರು ಮಕ್ಕಳ ಶಾಲಾ ಶುಲ್ಕವನ್ನು ಸಂಸ್ಥೆ ವತಿಯಿಂದಲೇ ಭರಿಸಲಾಗುತ್ತಿದೆ. ಕರೊನಾ ಸಮಯದಲ್ಲಿ ಯಾರೊಬ್ಬರ ವೇತನವನ್ನು ಕಡಿತ ಮಾಡದೆ ಸಂಪೂರ್ಣ ವೇತನ, ಆಹಾರ ಧಾನ್ಯ, ವೈದ್ಯಕೀಯ ವೆಚ್ಚವನ್ನು ಭರಿಸುವ ಮೂಲಕ ಮಾನವೀಯತೆ ಮೆರೆದಿತ್ತು.
ಸಂದೇಶ ಕುಟುಂಬದ ಹಿನ್ನೆಲೆ:
ಸಂದೇಶ ಕುಲಕರ್ಣಿ ಅವರು 1988ರ ಮೇ 11ರಂದು ಬೆಳಗಾವಿಯಲ್ಲಿ ಜನಿಸಿದರು. ಅವರ ತಂದೆ ಗೋವಿಂದರಾಜ ಕುಲಕರ್ಣಿ ರಾಜ್ಯ ಸರ್ಕಾರದಲ್ಲಿ ಟೌನ್ ಪ್ಲಾ್ಯನಿಂಗ್ ಆಯುಕ್ತರಾಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ತಾಯಿ ರಜನಿ ಕುಲಕರ್ಣಿ ಗೃಹಿಣಿಯಾಗಿದ್ದಾರೆ. ಅಣ್ಣ ಸಂಕೇತ ಕುಲಕರ್ಣಿ ಹಾಗೂ ತಂಗಿ ಶ್ರೀದೇವಿ ಕುಲಕರ್ಣಿ ಒಡಹುಟ್ಟಿದವರು. ಬಿಸಿಎ ಪದವೀಧರೆ ಸ್ಮಿತಾ ಸಂದೇಶ ಕುಲಕರ್ಣಿ ಅವರನ್ನು ವರಿಸಿದು, ಶೌರ್ಯ ಹಾಗೂ ಶ್ಲೋಕ ಎಂಬ ಇಬ್ಬರು ಮಕ್ಕಳಿದ್ದಾರೆ. ಸಂದೇಶ ತಂದೆ ಶಿವಮೊಗ್ಗದಲ್ಲಿ ಸೇವೆ ಆರಂಭಿಸಿದರು. ನಂತರ, ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ, ಕಲಬುರಗಿ ಮತ್ತು ಕೊನೆಗೆ ಕಾರವಾರದಲ್ಲಿ ಟೌನ್ ಪ್ಲಾ್ಯನಿಂಗ್ ಆಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 1ರಿಂದ 5ರವರೆಗೆ ಕಲಬುರಗಿಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಸಂದೇಶ, 6ರಿಂದ ಇಂಜಿನಿಯರಿಂಗ್ ಪದವಿವರೆಗೆ ಕಾರವಾರದಲ್ಲಿಯೇ ವಿದ್ಯಾಭ್ಯಾಸ ಪೂರ್ಣಗೊಳಿಸಿದರು.
ಕಟ್ಟಡದಿಂದ ಬಿದ್ದಿದ್ದೇ ಟರ್ನಿಂಗ್ ಪಾಯಿಂಟ್:
ಹೈದರಾಬಾದ್ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಿಂದ ಕಾಲು ಜಾರಿ ಕೆಳಗೆ ಬಿದ್ದೆ. ಬಳಿಕ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಾಣಬೇಕಾಯಿತು ಎನ್ನುತ್ತಾರೆ ಸಂದೇಶ ಕುಲಕರ್ಣಿ. ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ಸಾಕಷ್ಟು ಮುಗ್ಗಟ್ಟು ಎದುರಿಸಬೇಕಾಯಿತು. ಈ ಎಲ್ಲ ಕಷ್ಟದ ಸಮಯದಲ್ಲಿ ನನ್ನ ಪತ್ನಿ ಮತ್ತು ಕುಟುಂಬ ಸಾಥ್ ನೀಡಿದರು. ಎಲ್ಲ ಸಂದರ್ಭದಲ್ಲಿಯೂ ಬೆನ್ನುಲುಬಾಗಿ ನಿಂತು ಧೈರ್ಯ ಹೇಳಿದರು. ಅದಾದ ನಂತರ 2016ರಲ್ಲಿ ಈ ಸಂಸ್ಥೆಯನ್ನು ಆರಂಭಿಸಿದೆವು. ಸಂಸ್ಥೆಯು ಆರಂಭದಲ್ಲಿ ನಿರ್ವಹಣೆ ಮಾಡಲು ಸ್ವಲ್ಪ ಕಷ್ಟಪಟ್ಟೆವು. ಮೊದಲ ವರ್ಷ ಸುಮಾರು 80 ಲಕ್ಷ ರೂ. ವಹಿವಾಟು ನಡೆಸಿದೆವು. ಬಳಿಕ ಆರ್ಥಿಕವಾಗಿ ಚೇತರಿಸಿಕೊಂಡು ಇಂದು ಲಾಭದಾಯಕವಾಗಿ ನಡೆಯುತ್ತಿದೆ. ಸಂಸ್ಥೆಯು 250 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಇದಕ್ಕೆಲ್ಲ ಭಗವಂತ ಶ್ರೀಕೃಷ್ಣನ ಕೃಪಾಶೀರ್ವಾದವೇ ಕಾರಣ ಎಂಬುದು ನನ್ನ ನಂಬಿಕೆಯಾಗಿದೆ ಎನ್ನುತ್ತಾರೆ ಸಂದೇಶ ಕುಲಕರ್ಣಿ.
ಕೇವಲ 10 ದಿನದಲ್ಲಿ ಒಂದು ಮಹಡಿ ನಿರ್ವಣ!
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿ ರುವುದರಿಂದ ಕಡಿಮೆ ಹಣ ಮತ್ತು ಕಡಿಮೆ ಸಮಯದಲ್ಲಿ ಜನರಿಗೆ ಮನೆಗಳನ್ನು ನಿರ್ವಿುಸಿಕೊಡಬೇಕು ಎಂಬುದು ಸಂಸ್ಥೆಯ ಗುರಿಯಾಗಿದೆ. ಅಲ್ಯೂಮಿನಿಯಮ್ ಫಾಮ್್ಸರ್ ಸದ್ಯ ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ಗಳನ್ನು ನಿರ್ಮಾಣ ಮಾಡಲು ಬಳಸಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ಧಿ ಮಾಡಿ ಮುಂದಿನ ದಿನಗಳಲ್ಲಿ ಇಂಡಿಪೆಂಡೆಂಟ್ ಹೋಮ್್ಸ (ಸ್ವತಂತ್ರ ಮನೆ) ನಿರ್ವಣಕ್ಕೆ ತಂತ್ರಜ್ಞಾನ ಬಳಸಿಕೊಳ್ಳುವಂತಾಗಬೇಕು. ಒಂದೆರಡು ತಿಂಗಳಿನಲ್ಲಿ ಮನೆಗಳನ್ನು ನಿರ್ವಿುಸಿಕೊಡಬೇಕು. ಈಗ 200 ಬಾರಿ ಬಳಸುತ್ತಿರುವ ಫಾಮ್್ಸರ್ಳನ್ನು 400 ಬಾರಿ ಬಳಸುವಂತಹ ತಂತ್ರಜ್ಞಾನವನ್ನು ಸಂಶೋಧಿಸುವುದು ಸೇರಿ ಹತ್ತಾರು ಭವಿಷ್ಯದ ಗುರಿಗಳನ್ನಿಟ್ಟುಕೊಂಡು ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎನ್ನುತ್ತಾರೆ ಸಂದೇಶ.
ಹೈಸ್ಕೂಲ್ ವ್ಯಾಸಂಗ ಮಾಡುವ ವೇಳೆ ನನ್ನ ಗುರುಗಳು ಚಿತ್ರದುರ್ಗ, ಕೋಲಾರ, ಸೇಲಂ ಸೇರಿ ವಿಜ್ಞಾನ ವಸ್ತು ಪ್ರದರ್ಶನ ಇಸ್ರೋ ಸೇರಿ ಹಲವೆಡೆ ಭೇಟಿ ಕೊಡಿಸಿ ಹೊಸ ಉತ್ಸಾಹ ಮತ್ತು ಚಿಂತನೆ ಹುಟ್ಟುವಂತೆ ಮಾಡುತ್ತಿದ್ದರು. ಒಂದು ಹಂತದಲ್ಲಿ ಖ್ಯಾತ ವಿಜ್ಞಾನಿಯೂ ಆಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡುವ ಸಂದರ್ಭ ಎದುರಾಗಿತ್ತು. ಇದೆಲ್ಲರ ಪರಿಣಾಮ ಭೌತಶಾಸ್ತ್ರ ಕ್ಷೇತ್ರದಲ್ಲಿ ಮುಂದುವರಿಯ ಬೇಕೆಂಬ ಗುರಿ ಹೊಂದಿದ್ದೆ ಎಂದು ಸ್ಮರಿಸುತ್ತಾರೆ ಸಂದೇಶ ಕುಲಕರ್ಣಿ.
ಅಂತಾರಾಷ್ಟೀಯ ಗುಣಮಟ್ಟದ ಉಪಕರಣವನ್ನು ಸ್ಥಳಿಯವಾಗಿ ನಿರ್ವಿುಸಿ ಗುಣಮಟ್ಟ ಕಾಪಾಡಿಕೊಳ್ಳುತ್ತಿದ್ದಾರೆ. ಸಂದೇಶ ಅವರು ವ್ಯಕ್ತಿಗತವಾಗಿಯೂ ಉತ್ತಮ ವ್ಯಕ್ವಿತ್ವ ರೂಢಿಸಿಕೊಂಡಿದ್ದಾರೆ. ಯುವ ಉದ್ಯಮಿಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ‘ವಿಜಯವಾಣಿ’ ಹಾಗೂ ಪ್ರಶಸ್ತಿಗೆ ಅರ್ಹತೆ ಹೊಂದಿರುವ ಸಂದೇಶ ಅವರಿಗೂ ಅಭಿನಂದನೆಗಳು.
| ರಾಜಶೇಖರ್ ಪಾಟೀಲ್ ಕಾಸ್ಗ್ರೌಂಡ್ ಬಿಲ್ಡರ್ಸ್ಸೇವೆಗಾಗಿ ಆರಂಭಿಸಿದ ಸಂಸ್ಥೆ ಉತ್ಪಾದನೆ ಹಂತಕ್ಕೆ ಪ್ರಗತಿ: ಕಟ್ಟಡ ನಿರ್ವಣಕ್ಕೆ ಸಂಬಂಧಿಸಿದ ಉಪಕರಣಗಳನ್ನು ಉತ್ಪಾದನೆ ಮಾಡುವ ಮತ್ತು ಅದನ್ನು ಸರ್ವೀಸ್ ನೀಡುವ ಏಜೆನ್ಸಿಗಳು ದೇಶದಲ್ಲಿ ಇರಲಿಲ್ಲ. ಮೊದಲು ವಿದೇಶಗಳಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಈ ವಿಷಯ ತಿಳಿದು 2016ರಲ್ಲಿ ಸರ್ವೀಸ್ ಇಂಡಸ್ಟ್ರಿಗೆ ಎಂಟ್ರಿ ನೀಡಿದೆವು. ಬಳಿಕ 2021ರಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಅಲ್ಯುಮಿನಿಯಂ ಫಾಮ್್ಸರ್ ಉತ್ಪಾದನೆ ಮಾಡಲು ಆರಂಭ ಮಾಡಿದೆವು. ಒಂದು ಅಲ್ಯೂಮಿನಿಯಂ ಫಾಮ್್ಸರ್ ಅನ್ನು 200 ಬಾರಿ ಬಳಸಬಹುದು. ವಿದೇಶಗಳಿಂದ ನಾವು ಫಾಮ್್ಸರ್ ಅನ್ನು ತಂದು ದೇಶದಲ್ಲಿ ಬಾಡಿಗೆಗೆ ನೀಡುತ್ತಿದ್ದೆವು. ಬಾಡಿಗೆ ಪಡೆದವರಿಗೆ ಇದರ ನಿರ್ವಹಣೆ ತಿಳಿದಿರಲಿಲ್ಲ. ಹೀಗಾಗಿ, ನಮಗೇ ನಿರ್ವಹಣೆ ಮಾಡುವಂತೆ ಸೂಚಿಸಿದರು. ಹಂತ ಹಂತವಾಗಿ ಅದನ್ನು ನಾವೇ ಉತ್ಪಾದನೆ ಮಾಡಲು ಶುರು ಮಾಡಿದೆವು. ಈಗ ನಾವೇ ಉತ್ಪಾದನೆ ಮಾಡಿ ಸರ್ವೀಸ್ ನೀಡುತ್ತಿದ್ದೇವೆ ಎನ್ನುತ್ತಾರೆ ಸಂದೇಶ ಕುಲಕರ್ಣಿ.
ಸಂಸ್ಥೆಯನ್ನು ನಿರ್ವಿುಸಬೇಕೆಂಬ ಮಹದಾಸೆ ಇದ್ದರೂ ಕೆಲವು ಸಮಯ ಹಲವು ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದರು. ಕಟ್ಟಡದ ಮೇಲಿಂದ ಬಿದ್ದು ಸಾಕಷ್ಟು ನೋವು ಅನುಭವಿಸಿದಾಗ ಕೆಲಸ ಮಾಡುತ್ತಿದ್ದ ಕಂಪನಿಯು ವೇತನ ನೀಡಲಿಲ್ಲ. ಆಗ ಏನಾದರೂ ಮಾಡಿ ಸಂಸ್ಥೆ ಕಟ್ಟಬೇಕೆಂದು ನಿರ್ಧರಿಸಿದರು.ಅವರಂದುಕೊಂಡಂತೆ ದುಡಿಯುತ್ತಿದ್ದಾರೆ. ಅವರಿಗೆ ಬೆನ್ನುಲುಬಾಗಿ ನಿಂತು ಸಂಸ್ಥೆ ಹಣಕಾಸು ವಹಿವಾಟು ನೋಡಿಕೊಳ್ಳುತ್ತಿದ್ದೇನೆ. ಬೆಂಗಳೂರು ರತ್ನ ಪ್ರಶಸ್ತಿ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ.
| ಸ್ಮಿತಾ ಸಂದೇಶ ಕುಲಕರ್ಣಿ ಸಂಸ್ಥೆಯ ನಿರ್ದೇಶಕಿ
ಸಂಸ್ಥೆಯ ಗುರಿ, ಕಾರ್ಯಕ್ರಮಗಳ ಬಗ್ಗೆ ಸಿಬ್ಬಂದಿಗೆ ಸ್ಪಷ್ಟವಾದ ಮಾಹಿತಿ ನೀಡುವ ಮೂಲಕ ಸಂದೇಶ ಅವರು ಸಂಸ್ಥೆಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿದ್ದಾರೆ. ಸಿಬ್ಬಂದಿಯನ್ನು ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಅವರಿಗೆ ಪ್ರಶಸ್ತಿ ದೊರೆತಿರುವುದು ಇಡೀ ಸಂಸ್ಥೆಗೆ ಸಂತಸ ತಂದಿದೆ.
| ಜಗದೀಶ್ ರಾವ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ
2016ರಲ್ಲಿ ಆರಂಭವಾದ ಕಂಪನಿಯು ಕರೊನಾ ಸಮಯದಲ್ಲಿನ ಏಳುಬೀಳುಗಳನ್ನು ಕಂಡು ಇಂದು ಸಾವಿರ ಪಟ್ಟು ಪ್ರಗತಿ ಕಂಡಿದೆ. ಇದಕ್ಕೆಲ್ಲ ಸಂದೇಶ ಅವರ ಮಾರ್ಗದರ್ಶನ, ಸಿಬ್ಬಂದಿಯನ್ನು ಹುರಿದುಂಬಿಸಿ ಕೆಲಸ ಮಾಡಿಸುವ ಗುಣ ಕಾರಣ. ದಕ್ಷತೆ ಜತೆಗೆ ಮಾನವೀಯತೆಯನ್ನೂ ಅಳವಡಿಸಿಕೊಂಡಿರುವ ಅವರಿಗೆ ಪ್ರಶಸ್ತಿ ದೊರೆತಿರುವುದಕ್ಕೆ ಅಭಿನಂದನೆ ತಿಳಿಸುತ್ತೇನೆ.
| ಮೇಘಾ ಸಂಸ್ಥೆಯ ಉಪಾಧ್ಯಕ್ಷೆ