ಪೊಲೀಸ್ ಇಲಾಖೆಯಲ್ಲಿ 9 ವರ್ಷ ಸೇವೆ ಸಲ್ಲಿಸಿದ್ದ ಶ್ವಾನ 'ಕಾವ್ಯ' ನಿಧನ!

Untitled design - 2023-08-31T185022.312
Published on

ಬೆಂಗಳೂರು: ನಗರ ಸಶಸ್ತ್ರ ಮೀಸಲು ಪಡೆ ಬೆಂಗಳೂರು ದಕ್ಷಿಣ ವಲಯದ ಪೊಲೀಸ್ ಇಲಾಖೆಯಲ್ಲಿ 9 ವರ್ಷ ಸೇವೆ ಸಲ್ಲಿಸಿದ್ದ ಹೆಸರಾಂತ ಶ್ವಾನ ಕಾವ್ಯ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದೆ.

ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದ ಗಟ್ಟಿಗಿತ್ತಿ ಶ್ವಾನ ಕಾವ್ಯ ನಿಧನ ಹೊಂದಿದ್ದು, ಪೊಲೀಸ್ ಇಲಾಖೆ ಬಾಂಬ್ ನಿಷ್ಕ್ರಿಯ ದಳದಲ್ಲಿ ಕಾರ್ಯನಿರ್ವಹಿಸಿತ್ತು. ವಯೋಸಹಜ ಖಾಯಿಲೆಯಿಂದ ಶ್ವಾನ ಸಾವನ್ನಪ್ಪಿದೆ. 2014 ರಲ್ಲಿ ಜನಿಸಿದ್ದ ಕಾವ್ಯ, ಅದೇ ವರ್ಷ ಇಲಾಖೆಗೆ ಸೇರ್ಪಡೆಯಾಯಿತು.

ಒಂಭತ್ತು ವರ್ಷ, ಆರು ತಿಂಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಕಾವ್ಯ, ಹಲವು ಬಾಂಬ್ ಪತ್ತೆ ಕಾರ್ಯಗಳಲ್ಲಿ ಭಾಗಿಯಾಗಿತ್ತು. ಇಂದು (ಆಗಸ್ಟ್​ 31) ಶ್ವಾನ ಕಾವ್ಯಗೆ ಪೊಲೀಸ್​ ಇಲಾಖೆಯಿಂದ ಗೌರವ ವಂದನೆ ಜತೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net