ದುಷ್ಕರ್ಮಿಗಳಿಂದ ಪೊಲೀಸ್​ ಮಾಹಿತಿದಾರನ ಬರ್ಬರ ಹತ್ಯೆ: ಹಳೆಯ ದ್ವೇಷವೇ ಕೊಲೆಗೆ ಕಾರಣವೆಂಬ ಶಂಕೆ

Police Informer
Published on

ಬೆಂಗಳೂರು: ಪೊಲೀಸ್ ಮಾಹಿತಿದಾರರೊಬ್ಬರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆ ಬಸವೇಶ್ವರ ನಗರ ಬಳಿಯ ಕಮಲಾನಗರದಲ್ಲಿ ನಡೆದಿದೆ.

ಪ್ರಭು ಅಲಿಯಾಸ್ ಅಪ್ಪು(27) ಕೊಲೆಯಾದ ದುರ್ದೈವಿ. ಈತ ಸಿದ್ದೇಶ್ವರ ಕೋ ಆಪರೇಟಿವ್ ಬ್ಯಾಂಕ್​ನಲ್ಲಿ ಚೆಕ್ ಕಲೆಕ್ಟರ್​​ ಆಗಿ ಕೆಲಸ ಮಾಡುತ್ತಿದ್ದ. ಇದರ ನಡುವೆ ಪೊಲೀಸರಿಗೆ ಕಳ್ಳರ ಬಗ್ಗೆ ಮಾಹಿತಿ ನೀಡುತ್ತಿದ್ದ. ಎರಡು ಬಾರಿ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಪ್ರಭು ಹಿಡಿದುಕೊಟ್ಟಿದ್ದ. ಹೀಗಾಗಿ ಹಳೆ ದ್ವೇಷವೇ ಕೊಲೆಗೆ ಕಾರಣ ಎಂದು ಶಂಕ ವ್ಯಕ್ತವಾಗಿದೆ.

ಕೆಲಸ ಮುಗಿಸಿ ರಾತ್ರಿ ಮನೆಗೆ ಬರುತ್ತಿದ್ದಾಗ ಕಿಡಿಗೇಡಿಗಳು ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಪ್ರಭುಗೆ 20ಕ್ಕು ಹೆಚ್ಚು ಕಡೆ ಇರಿದು ಕೊಂದಿದ್ದಾರೆ. ತೀವ್ರ ರಕ್ತಸ್ರಾವದಿಂದ ನರಳಿ ಸ್ಥಳದಲೇ ಸಾವನ್ನಪ್ಪಿದ್ದಾನೆ. ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net