ಪ್ರೊ ಆಮ್ ಮುಯ್ ಥಾಯ್ ಚಾಂಪಿಯನ್‌ಷಿಪ್‌ನಲ್ಲಿ ಸಮರ ಕಲೆಗಳ ಮಹಾ ಪ್ರದರ್ಶನ

mu
Published on

ಬೆಂಗಳೂರು: ನಗರದ ಗ್ಲೋಬಲ್ ಡಿವೈನಿಟಿ ಮಾಲ್‌ನಲ್ಲಿ ನಡೆದ 9ನೇ ಪ್ರೊ ಆಮ್ ಮುಯ್ ಥಾಯ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಎಂಟು ವಿವಿಧ ರಾಜ್ಯಗಳ ಆಟಗಾರರು ಭಾಗವಹಿಸಿದರು. ಒ3 ಸ್ಪೋರ್ಟ್ಸ್ ಮತ್ತು ಗ್ಲೋಬಲ್ ಡಿವಿನಿಟಿ ಮಾಲ್ ಸಹಭಾಗಿತ್ವದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರದ ವೈವಿಧ್ಯಮಯ ಸಮರ ಕಲೆಗಳ ಪ್ರತಿಭೆಯನ್ನು ಪ್ರದರ್ಶಿಸಲಾಯಿತು.

ಟೂರ್ನಿಯ ಮೊದಲ ದಿನ ಬುಲ್ ಡಾಗ್ ಆರ್ಮ್ ರೆಸ್ಲಿಂಗ್ ಮ್ಯಾನೇಜ್‌ಮೆಂಟ್ ಆಯೋಜಿಸಿದ ಸೂಪರ್ ಪಂದ್ಯಗಳು ಆರ್ಮ್ ರೆಸ್ಲಿಂಗ್ ಎಲ್ಲರ ಮನ ಗೆದ್ದಿತು. ಒಟ್ಟು 20 ಪಂದ್ಯಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ 12 ಅಧಿಕಾರಿಗಳು, 9 ಗೌರವ ಅಧಿಕಾರಿಗಳು ಮತ್ತು 21 ತಾಂತ್ರಿಕ ಅಧಿಕಾರಿಗಳನ್ನು ಒಳಗೊಂಡ ಒಟ್ಟು 42 ಮಂದಿ ಭಾಗವಹಿಸಿದ್ದರು. ತಮಿಳುನಾಡು, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಕೇರಳ, ಮಹಾರಾಷ್ಟ್ರ, ಒರಿಸ್ಸಾ ಮತ್ತು ಮಣಿಪುರದ ಸ್ಪರ್ಧಿಗಳು ತಮ್ಮ ರಾಜ್ಯದ ಗೌರವವನ್ನು ಎತ್ತಿ ಹಿಡಿದು, ತಮ್ಮ ಸಮರ ಕಲೆಗಳಿಂದ ಪ್ರೇಕ್ಷಕರನ್ನು ಆಸನದ ಅಂಚಿನಲ್ಲಿ ಕುತೂಹಲದಿಂದ ಕೂರುವಂತೆ ಮಾಡಿದರು.

ಕರ್ನಾಟಕದ ಅಗ್ರ 6 ಆಟಗಾರರನ್ನು ಒಳಗೊಂಡ ಬಾಕ್ಸಿಂಗ್ ಎಕ್ಸಿಬಿಷನ್ ಸೂಪರ್ ಪಂದ್ಯಗಳ ಜತೆಗೆ ನೆಫ್, ಎಂಸಿ ಥ್ರಿಫ್ಟ್ೃ, ರಾಪ್ಚಾ, ಪವನ್ ರಿಯೊ ಮುಂತಾದ ಕಲಾವಿದರಿಂದ ಸಂವೇದನಾಶೀಲ ಪ್ರದರ್ಶನಗಳು ಮತ್ತು ಮೆಲ್ವಿನ್ ಏಕವ್ಯಕ್ತಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗ್ಲೋಬಲ್ ಡಿವೈನಿಟಿ ಮಾಲ್‌ನ ಮುಖ್ಯಸ್ಥರಾದ ಪ್ರದೀಪ್ ಮಾತನಾಡಿ, ವಿಶಿಷ್ಟ ಕಾರ್ಯಕ್ರಮಗಳಲ್ಲದೇ ಎಲ್ಲ ರೀತಿಯ ಸಮುದಾಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಮಾಲ್ ಪ್ರದೇಶಗಳನ್ನು ರಚಿಸುವುದು ಮುಖ್ಯ. ಗ್ಲೋಬಲ್ ಡಿವೈನಿಟಿ ಮಾಲ್‌ನಲ್ಲಿ ಮೌಯಿ ಥಾಯ್ ಮತ್ತು ಯುದ್ಧ ಕ್ರೀಡೆಗಳಿಗೆ ತಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net