30 ವರ್ಷದ ಸ್ನೇಹ ಕೊಲೆಯಲ್ಲಿ ಅಂತ್ಯ: ಗೆಳಯನ ಪತ್ನಿ ಜತೆ ಅಕ್ರಮ ಸಂಬಂಧ, ಸಂಚು ಮಾಡಿ ಭೀಕರ ಹತ್ಯೆ! Friendship

Friendship
Published on

Friendship : ತನ್ನ ಬಾಲ್ಯದ ಸ್ನೇಹಿತನಿಂದಲೇ 39 ವರ್ಷದ ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆಯಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯ ಹೆಂಡತಿಯ ಜತೆ ಆರೋಪಿ ಅಕ್ರಮ ಸಂಬಂಧ ಹೊಂದಿದ್ದು, ಸಂಚು ಮಾಡಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ವಿಜಯ ಕುಮಾರ್​ ಎಂದು ಗುರುತಿಸಲಾಗಿದೆ. ಆರೋಪಿ ಧನಂಜಯ್​ ಅಲಿಯಾಸ್ ಜಯ್​ ಮತ್ತು ವಿಜಯ್​ ಕುಮಾರ್ ಕಳೆದ 30 ವರ್ಷಗಳಿಂದ ಸ್ನೇಹಿತರು. ಸುಕಂದಕಟ್ಟೆ ಏರಿಯಾಗೆ ಸ್ಥಳಾಂತರವಾಗುವ ಮುನ್ನ ಮಾಗಡಿಯಲ್ಲಿ ಇಬ್ಬರು ಒಟ್ಟಿಗೆ ಬೆಳೆದರು.​

ವಿಜಯ್​ ಕುಮಾರ್​, ರಿಯಲ್​ ಎಸ್ಟೇಟ್​ ಮತ್ತು ಹಣಕಾಸು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದ. 10 ವರ್ಷಗಳ ಹಿಂದೆ ಆಶಾ ಎಂಬಾಕೆಯನ್ನು ಮದುವೆಯಾಗಿ ಕಾಮಾಕ್ಷಿ ಪಾಳ್ಯದಲ್ಲಿ ದಂಪತಿ ವಾಸವಿದ್ದರು. ಆಶಾ ಮತ್ತು ಧನಂಜಯ್​ ನಡುವೆ ಅಕ್ರಮ ಸಂಬಂಧ ಇರುವುದು ವಿಜಯ್​ಗೆ ತಿಳಿಯಿತು. ಅಲ್ಲದೆ, ಇಬ್ಬರು ಒಟ್ಟಿಗೆ ಇರುವಾಗ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದ. ಇದರೊಂದಿಗೆ ಇಬ್ಬರ ಫೋಟೋಗಳನ್ನು ಸಹ ಪತ್ತೆಹಚ್ಚಿದ್ದ.

ಇದಾದ ಬಳಿಕ ವಿಜಯ್​ ಮತ್ತು ಧನಂಜಯ್​ ನಡುವೆ ಭಾರಿ ಜಗಳ ನಡೆದಿತ್ತು. ತನ್ನ ಸಂಸಾರವನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ಹೆಂಡತಿಯೊಂದಿಗೆ ಕಡಬಗೆರೆ ಬಳಿಯ ಮಾಚೋಹಳ್ಳಿಯಲ್ಲಿರುವ ಬಾಡಿಗೆ ಮನೆಗೆ ಸ್ಥಳಾಂತರ ಮಾಡಿದರು. ಆದರೂ, ಆಶಾ ತನ್ನ ಬುದ್ಧಿಯನ್ನು ಬಿಡಲಿಲ್ಲ. ಧನಂಜಯ್​ ಜೊತೆ ಮತ್ತೆ ಅನೈತಿಕ ಸಂಬಂಧವನ್ನು ಮುಂದುವರಿಸಿದಳು.

ಕೊಲೆ ನಡೆದ ದಿನ ಸಂಜೆಯವರೆಗೂ ಮನೆಯಲ್ಲಿಯೇ ಇದ್ದ ವಿಜಯ್​, ಸಂಜೆಯ ಬಳಿಕ ಹೊರಗೆ ಹೋದ. ಬಳಿಕ ಮಾಚೋಹಳ್ಳಿಯ ಡಿಗ್ರೂಪ್ ಲೇಔಟ್ ಪ್ರದೇಶದಲ್ಲಿ ಆತನ ಶವ ಪತ್ತೆಯಾಯಿತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ತನಿಖಾಧಿಕಾರಿಗಳಿಗೆ ಆಶಾ ಮತ್ತು ಧನಂಜಯ ಸಂಬಂಧ ಗೊತ್ತಾಯಿತು. ಇದರಿಂದ ಸಹಜವಾಗಿಯೇ ಅವರ ಮೇಲೆ ಅನುಮಾನ ಮೂಡಿದೆ. ಮೇಲ್ನೋಟಕ್ಕೆ ಇಬ್ಬರು ಸಂಚು ಮಾಡಿ ಕೊಂದಿರುವುದು ತಿಳಿದುಬಂದಿದೆ.

ಸದ್ಯ ಮಾದನಾಯಕನಹಳ್ಳಿ ಪೊಲೀಸರು ಆಶಾಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಕಾಣೆಯಾಗಿರುವ ಧನಂಜಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net