ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ನಿಂತಿದ್ದ ಇಂಡಿಗೋ ವಿಮಾನಕ್ಕೆ ಗುದ್ದಿದ ಟೆಂಪೋ ಟ್ರಾವೆಲರ್! Kempegowda International Airport

Kempegowda International Airport accident
Published on

ಬೆಂಗಳೂರು:  ಕೆಂಪೇಗೌಡ ಅಂತಾರಾಷ್ಟ್ರೀಯ (Kempegowda International Airport) ವಿಮಾನ ನಿಲ್ದಾಣದಲ್ಲಿ  ನಿಂತಿದ್ದ ಇಂಡಿಗೋ ವಿಮಾನಕ್ಕೆ  ಟೆಂಪೋ ಟ್ರಾವೆಲರ್ ಬಂದು ಡಿಕ್ಕಿ ಹೊಡೆದಿದೆ.

ಟೆಂಪೋ ಟ್ರಾವೆಲರ್​​​ನ ಚಾಲಕ ನಿದ್ರೆಯ ಮಂಪರಿನಲ್ಲಿದ್ದ. ಚಾಲಕನ ಅರಿವಿಗೆ ಬಾರದೇ ಅಪಘಾತ ಆಗಿದೆ.  ಇಂಡಿಗೊ A320 ವಿಮಾನದ ಕೆಳಭಾಗಕ್ಕೆ ಟ್ರಾವೆಲರ್​ ಡಿಕ್ಕಿ ಆಗುತ್ತಿದ್ದಂತೆ ಚಾಲಕ ಎಚ್ಚೆತ್ತುಕೊಂಡಿದ್ದಾನೆ. ಘಟನೆ ಸಂದರ್ಭದಲ್ಲಿ ಟೆಂಪೋ ಟ್ರಾವೆಲರ್​ನಲ್ಲಿ ಯಾರೂ ಇರಲಿಲ್ಲ ಎಂದು ವರದಿಯಾಗಿದೆ.

ಘಟನೆ ಸಂಬಂಧ ಹೆಚ್ಚಿನ ತನಿಖೆ ಆರಂಭವಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net