ಲೇಡಿಸ್ ಟಾಯ್ಲೆಟ್​ಗೆ ನುಗ್ಗಿ ವಿದ್ಯಾರ್ಥಿನಿ ಜತೆ ಅಸಭ್ಯ ವರ್ತನೆ ಪ್ರಕರಣ: 13 ದಿನಗಳ ಬಳಿಕ ಆರೋಪಿ ಬಂಧನ

Women College
Published on

ಬೆಂಗಳೂರು: ಜಯನಗರದ ವಿಜಯ ಕಾಲೇಜಿನಲ್ಲಿ ಹುಡುಗಿಯರ ಶೌಚಾಲಯಕ್ಕೆ ಯುವಕನೊಬ್ಬ ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅಜಯ್‌ ಕುಮಾರ್ ಎಂದು ಗುರುತಿಸಲಾಗಿದೆ. ಈ ಘಟನೆ ಜನವರಿ 10ರಂದು ಬೆಳಗ್ಗೆ 8 ಗಂಟೆಗೆ ನಡೆದಿತ್ತು. ಘಟನೆ ನಡೆದ 13 ದಿನಗಳ ಬಳಿಕ ಕೊನೆಗೂ ಆರೋಪಿಯನ್ನು ಜಯನಗರ‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾನಸಿಕ ಅಸ್ವಸ್ಥನಾಗಿರುವ ಆರೋಪಿ. ಕನ್ನಡ ಸಿನಿಮಾ ಮಾಡುವುದಾಗಿ ಓಡಾಡಿಕೊಂಡಿದ್ದ. ಊಟ ಮಾಡಿದ ಬಳಿಕ ಶೌಚಾಲಯಕ್ಕೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದ. ಮಾನಸಿಕ ಸ್ಥೀಮಿತ ಇಲ್ಲದ ಕಾರಣ ಸಿಕ್ಕ ಸಿಕ್ಕ ಶೌಚಾಲಯಕ್ಕೆ ನುಗ್ಗುತ್ತಿದ್ದ. ಅಂದು ಕೂಡ ಊಟ ಮಾಡಿ ಹೆಣ್ಣು ಮಕ್ಕಳ ಶೌಚಾಲಯಕ್ಕೆ ನುಗ್ಗಿದ್ದ. ಈ ವೇಳೆ ಹೆಣ್ಣುಮಕ್ಕಳನ್ನು ಕಂಡು ಗಾಬರಿಯಾಗಿ ಅವರ ಬಾಯಿ ಮುಚ್ಚಿ, ಬೆದರಿಕೆ ಹಾಕಿದ್ದ. ಸದ್ಯ ಆಡಳಿತ ಮಂಡಳಿ ದೂರಿನನ್ವಯ ಆರೋಪಿ ಅಜಯ್ ಬಂಧನವಾಗಿದೆ.

ಜ. 10ರಂದು ವಿದ್ಯಾರ್ಥಿನಿಯೊಬ್ಬಳು ಶೌಚಾಗೃಹದ ಒಳಗೆ ಹೋಗಿದ್ದಳು. ಈ ವೇಳೆ ಅದೇ ಶೌಚಗೃಹದ ಒಳಗಡೆ ಯುವಕನೊಬ್ಬ ನುಗ್ಗಿದ್ದ. ಬಳಿಕ ವಿದ್ಯಾರ್ಥಿನಿಯ ಜೊತೆ ಅಸಭ್ಯ‌ವಾಗಿ ವರ್ತಿಸಿದ್ದ. ತಕ್ಷಣ ವಿದ್ಯಾರ್ಥಿನಿ ಕಿರುಚಲು ಶುರು ಮಾಡಿದಾಗ, ಆತ ಗಾಬರಿಯಿಂದ ಟಾಯ್ಲೆಟ್​ನ ಬಾಗಿಲು ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದ.

ಈ ಘಟನೆ ಕಾಲೇಜು ವಿದ್ಯಾರ್ಥಿನಿಯರಲ್ಲಿ ಆತಂಕ ಸೃಷ್ಟಿಸಿತ್ತು. ಘಟನೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಸಹ ನಡೆಸಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಹೆದರಿದ ಕಾಲೇಜಿನ ಆಡಳಿತ ಮಂಡಳಿ ಜಯನಗರ ಪೊಲೀಸರಿಗೆ ದೂರು ನೀಡಿತ್ತು. ಇದೀಗ ಅಜಯ್​ ಕುಮಾರ್​ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net