

ಬೆಂಗಳೂರು: ಕರೊನಾ ಲಾಕ್ಡೌನ್ನಿಂದಾಗಿ ಲಕ್ಷಾಂತರ ಕೂಲಿ ಕಾರ್ವಿುಕರು ಕೆಲಸವಿಲ್ಲದೆ ಸಮಸ್ಯೆಗೆ ಸಿಲುಕು ವಂತಾಗಿದೆ. 2 ಲಕ್ಷಕ್ಕೂ ಹೆಚ್ಚಿರುವ ಆಟೋ, ಓಲಾ, ಉಬರ್ ಚಾಲಕರು ಕೂಡ ಆದಾಯವಿಲ್ಲದೆ ಸಾಲದ ಸುಳಿಗೆ ಸಿಲುಕುವಂತಾಗಿದೆ.
ಕರೊನಾ ಹರಡುವ ಭೀತಿಯಿಂದಾಗಿ ಮಾ. 22 ರಿಂದಲೇ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸೇವೆ ಸ್ಥಗಿತಗೊಳಿಸಲಾಗಿದೆ. ನಿತ್ಯ ಬಾಡಿಗೆ ಆಧಾರದಲ್ಲಿ ಮಾಲೀಕ ರಿಂದ ಆಟೋ ತಂದು ದುಡಿಮೆ ಮಾಡುತ್ತಿದ್ದ ಲಕ್ಷಕ್ಕೂ ಹೆಚ್ಚು ಚಾಲಕರು ಕಳೆದ ಒಂದು ತಿಂಗಳಿನಿಂದ ಆದಾಯವಿಲ್ಲದೆ ಪರ ದಾಡುತ್ತಿದ್ದಾರೆ.
ಸಾಲ ತೀರಿಸಲಾಗದೆ ಸಮಸ್ಯೆ: ಬೆಂಗಳೂರಿನಲ್ಲಿ 1.25 ಲಕ್ಷಕ್ಕೂ ಹೆಚ್ಚಿನ ಆಟೋಗಳಿವೆ. ಅದರಲ್ಲಿ ಶೇ. 80 ಆಟೋಗಳ ಚಾಲಕರು ಸಾಲ ಮಾಡಿ ಆಟೋ ಖರೀದಿ ಮಾಡಿದ್ದಾರೆ. ಅವರು ನಿತ್ಯ 2ರಿಂದ 3 ಸಾವಿರ ರೂ.ವರೆಗೆ ದುಡಿಯುತ್ತಾರೆ. ಅದರಲ್ಲಿ ಮಾಸಿಕ 6ರಿಂದ 10 ಸಾವಿರ ರೂ. ಸಾಲಕ್ಕಾಗಿ ಮೀಸಲಿಟ್ಟು, ಉಳಿದ ಹಣದಲ್ಲಿ ಆಟೋಗೆ ಇಂಧನ ತುಂಬಿಸುವುದು ಸೇರಿ ಇನ್ನಿತರ ಖರ್ಚು ನೋಡಿಕೊಳ್ಳಬೇಕಾಗುತ್ತದೆ. ಬಾಡಿಗೆ ಆಧಾರದಲ್ಲಿ ಬೇರೆಯವರಿಂದ ಆಟೋ ತಂದಿದ್ದರೆ ಮಾಲೀಕರಿಗೆ ನಿತ್ಯ 1 ಸಾವಿರ ರೂ. ನೀಡಬೇಕು. ನಿತ್ಯದ ದುಡಿಮೆಯನ್ನೇ ನೆಚ್ಚಿಕೊಂಡವರಿಗೆ ಈಗ ಆಹಾರ, ಮನೆ ಬಾಡಿಗೆ ಪಾವತಿಸಲು ಕಷ್ಟವಾಗಿದೆ.
ಓಲಾ, ಉಬರ್ ಚಾಲಕರೂ ಹೊರತಲ್ಲ: ಓಲಾ ಮತ್ತು ಉಬರ್ನಂತಹ ಆಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಚಾಲಕರ ಸಮಸ್ಯೆ ಆಟೋ ಚಾಲಕರಿಗಿಂತ ಭಿನ್ನವಾಗಿಲ್ಲ. ಬಹುತೇಕ ಓಲಾ ಮತ್ತು ಉಬರ್ ಚಾಲಕರು ತಮ್ಮ ಕಾರುಗಳಿಗೆ ತಾವೇ ಮಾಲೀಕರಾಗಿದ್ದಾರೆ. ಬೆಂಗಳೂರಿನಲ್ಲೇ 1 ಲಕ್ಷಕ್ಕೂ ಹೆಚ್ಚಿನ ಓಲಾ, ಉಬರ್ ಚಾಲಕರಿದ್ದಾರೆ. ಅವರು ಕೂಡ 10ರಿಂದ 15 ಸಾವಿರ ರೂ.ವರೆಗೆ ಬ್ಯಾಂಕ್ಗಳಿಗೆ ಸಾಲ ಪಾವತಿಸಬೇಕು. ಈಗ ಆದಾಯ ಇಲ್ಲದಿರುವುದರಿಂದ ಸಾಲದ ಕಂತು ಪಾವತಿ ಸಾಧ್ಯವಾಗುತ್ತಿಲ್ಲ. ಲಾಕ್ಡೌನ್ ಮುಗಿದರೂ ತಕ್ಷಣಕ್ಕೆ ಓಲಾ ಮತ್ತು ಉಬರ್ ಸೇವೆ ಆರಂಭವಾಗುವುದು ಅನುಮಾನ ಎಂಬುದು ಚಾಲಕರನ್ನು ಮತ್ತಷ್ಟು ಚಿಂತೆಗೆ ದೂಡಿದೆ.
ಆದಾಯ ಇಲ್ಲದೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ಆಹಾರವಿಲ್ಲದೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ದಾನಿಗಳು ನೀಡುವುದನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. | ನಳಿನಾ ಆಟೋ ಚಾಲಕಿ ಇತ್ತೀಚೆಗಷ್ಟೇ ಸಾಲ ಮಾಡಿ ಆಟೋ ಖರೀದಿ ಸಿದ್ದೇನೆ. ಅದರಿಂದ ಬರುವ ಆದಾಯದಿಂದಲೇ ಜೀವನ ಸಾಗಿಸಬೇಕು. ಆದರೀಗ ಆದಾಯವೇ ಇಲ್ಲದಂತಾಗಿದ್ದು, ಸಾಲ ತೀರಿಸಲಷ್ಟೇ ಅಲ್ಲದೆ ಜೀವನವೂ ಕಷ್ಟವಾಗಿದೆ. | ಶಿವಕುಮಾರ್ ಆಟೋ ಚಾಲಕ
ಮಾಲೀಕರಿಗೂ ನಷ್ಟ
ಚಾಲಕರಿಗೆ ಆಟೋ ನೀಡಿ ದಿನದ ಬಾಡಿಗೆ ಪಡೆಯುತ್ತಿರುವ ಮಾಲೀಕರು ಕೂಡ ಸಂಕಷ್ಟದಲ್ಲಿದ್ದಾರೆ. ಆಟೋ ಮೂಲಕ ಬರುವ ಆದಾಯವನ್ನೇ ನಂಬಿಕೊಂಡಿದ್ದ ಅವರಿಗೂ ಆದಾಯವಿಲ್ಲದಂತಾಗಿದೆ. ಹೀಗಾಗಿ ಆಟೋ ಖರೀದಿಗೆ ಮಾಡಿದ್ದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಆಟೋಗಳು ನಿಂತಲ್ಲೇ ನಿಂತಿರುವುದರಿಂದ ಲಾಕ್ಡೌನ್ ಮುಗಿದ ನಂತರ ರಿಪೇರಿ ಮಾಡಿಸಿಯೇ ಅವುಗಳನ್ನು ರಸ್ತೆಗಿಳಿಸಬೇಕಿದೆ.
| ಗಿರೀಶ್ ಗರಗ