ಪಶ್ಚಿಮ ಬಂಗಾಳ ಚುನಾವಣೆಯ ಸ್ಲೋಗನ್ ಬಿಡುಗಡೆ ಮಾಡಿದ ಟಿಎಂಸಿ

Mamata Banerjee
Published on

ಕಲ್ಕತ್ತ: ಇನ್ನೇನು ಕೆಲವೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದೆ. ತೀವ್ರ ಜಿದ್ದಾಜಿದ್ದಿ ಕಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಆಡಳಿತಾರೂಢ ಟಿಎಂಸಿ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.

ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಹವಣಿಸುತ್ತಿರುವ ಬಿಜೆಪಿ, ತನ್ನ ಸಿಎಂ ಅಭ್ಯರ್ಥಿಯಲ್ಲಿ ಗೊಂದಲ ಮೂಡಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಹೊರಗಿನವರು ಸಿಎಂ ಆಗುತ್ತಾರೆ ಎಂದು ಊಹಾಪೋಹ ಎದ್ದಿದೆ. ಈ ಹಿನ್ನೆಲೆಯಲ್ಲಿ ಈ ಸಾರಿ ಚುನಾವಣೆಯ ಸ್ಲೋಗನ್ ಬಿಡುಗಡೆ ಮಾಡಿರುವ ಟಿಎಂಸಿ, ಬಿಜೆಪಿಗೆ ಎದಿರೇಟು ನೀಡಿದೆ.

'Bengal Wants Its Own Daughter' ಎಂಬ ಸ್ಲೋಗನ್ ಟಿಎಂಸಿ ಅನಾವರಣಗೊಳಿಸಿದೆ. ಬಂಗಾಳಕ್ಕೆ ತನ್ನ ಮನೆ ಮಗಳು ಬೇಕೆ ಹೊರತು ಹೊರಗಿನವರು ಅಲ್ಲ ಎಂಬ ಸಂದೇಶವನ್ನು ಇದು ರವಾನಿಸಿದೆ. ಈ ಸ್ಲೋಗನ್ ಇರುವ ಬ್ಯಾನರ್ ಹೋರ್ಡಿಂಗ್ಸ್​ಗಳು ಕಲ್ಕತ್ತದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾರ್ಥ್ ಚಟರ್ಜಿ ಅವರು, ಬಂಗಾಳಕ್ಕೆ ಹೊರಗಿನವರ ಅವಶ್ಯಕತೆ ಇಲ್ಲ. ಹೊರಗಿನವರು ಇಲ್ಲಿ ಅಶಾಂತಿ ಸೃಷ್ಟಿಸಲು ಬಿಡುವುದಿಲ್ಲ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ್ ಚಟರ್ಜಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net