ಬರೀ 2ರೂ.ನಾಣ್ಯಗಳನ್ನೇ ನೀಡಿ 1.8 ಲಕ್ಷ ರೂ. ಬೆಲೆಯ ಬೈಕ್​ ಖರೀದಿಸಿದ ವ್ಯಾಪಾರಿ!

CoinBike
Published on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ವ್ಯಾಪಾರಿಯಾಗಿರುವ ಸುಬ್ರತಾ ಸರ್ಕಾರ್​ ಎಂಬಾತ ಬೈಕ್​ ಖರೀದಿಸಬೇಕೆಂಬ ಹಲವು ವರ್ಷಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ.

ಸತತ ಆರು ವರ್ಷಗಳಿಂದ ಸಂಗ್ರಹಿಸಿದ್ದ 2 ರೂ. ನಾಣ್ಯಗಳನ್ನೇ ನೀಡಿ 1.8 ಲಕ್ಷ ರೂ.ಬೆಲೆಯ ಬೈಕ್​ ಖರೀದಿಸಿದ್ದಾರೆ. 2016ರಲ್ಲಿ ನೋಟು ಅಮಾನ್ಯೀಕರಣಗೊಂಡ ಬಳಿಕ ನೋಟು ಅಭಾವದಿಂದಾಗಿ ನಾಣ್ಯಗಳನ್ನೇ ಸಂಗ್ರಹಿಸಿ ಬೈಕ್​ ಖರೀದಿಸಿದ್ದಾರೆ.

ಚಿಲ್ಲರೆ ವ್ಯಾಪಾರಿಯಾಗಿರುವ ಸುಬ್ರತ ಸರ್ಕಾರ್​​ಗೆ ನೋಟು ನಿಷೇಧ ಬಳಿಕ ಬರೀ ನಾಣ್ಯಗಳ ಚಲಾವಣೆಯೇ ಹೆಚ್ಚಿತಂತೆ. ಇದಕ್ಕಾಗಿಯೇ ತಾನು ನಾಣ್ಯಗಳನ್ನೇ ಸಂಗ್ರಹಿಸಿ ಬೈಕ್​ ಖರೀದಿಸಬೇಕೆಂದು ಅಂದೇ ಪಣ ತೊಟ್ಟಿದ್ದರು. ಅಂತೆಯೇ ನಾಣ್ಯಗಳಿಂದಲೇ ಬೈಕ್​ ಖರೀದಿಸಿದ್ದಾರೆ.

ಚೀಲಗಳಲ್ಲಿ ತುಂಬಿಕೊಂಡು ಶೋ ರೂಂಗೆ ಬಂದಿದ್ದ ಸರ್ಕಾರ್​ನನ್ನು ನೋಡಿ ಗಾಬರಿಯಾದ ಸಿಬ್ಬಂದಿ ನಂತರ ಬೈಕ್​ ಖರೀದಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಈತ ನೀಡಿದ್ದ ನಾಣ್ಯಗಳನ್ನು ಎಣಿಸುವಷ್ಟರಲ್ಲಿ ಸಿಬ್ಬಂದಿಗೆ ಸಾಕಾಗಿ ಹೋಯಿತು. ಕೊನೆಗೂ ಈ ವ್ಯಾಪಾರಿಯ ಕನಸು ನೆರವೇರಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net