

ಕೋಲ್ಕತ: ಫೇಸ್ಬುಕ್ನಲ್ಲಿ ಲೈವ್ ವಿಡಿಯೋ ಮಾಡಿಕೊಂಡು ಬೈಕ್ ಸವಾರಿ ಮಾಡುತ್ತಿದ್ದ 24 ವರ್ಷದ ಯುವಕನೊಬ್ಬ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಬುರ್ದ್ವಾನ್ ಜಿಲ್ಲೆಯ ಅಂದಾಲ್ ಪಟ್ಟಣದಲ್ಲಿ ನಡೆದಿದೆ.
ಚಂಚಲ್ ಧಿಬೊರ್ ಮೃತ ದುರ್ದೈವಿ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದ ಧಿಬೊರ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಸಾವಿಗೀಡಾಗಿದ್ದಾನೆ.
ಮೃತ ಧಿಬೊರ್ ಕುಟುಂಬದ ಪ್ರಕಾರ ಶನಿವಾರ ಸಂಜೆ ಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಮುಗಿಸಿ ಉಖ್ರಾದ ಧಿಬೊರ್ಪರಾದಲ್ಲಿರುವ ತನ್ನ ಮನೆಗೆ ಹಿಂದಿರುಗುವಾಗ ಘಟನೆ ಸಂಭವಿಸಿದೆ.
ಅಪಘಾತಕ್ಕೂ ಮುನ್ನ ಬೈಕ್ ರೈಡ್ ಮಾಡುತ್ತಾ ಫೇಸ್ಬುಕ್ ಲೈವ್ನಲ್ಲಿದ್ದ. ಆ ಸಮಯದಲ್ಲಿ ಬೈಕ್ ಮೇಲಿನ ಗಮನವನ್ನು ಕಳೆದುಕೊಂಡು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ತಲೆಗೆ ತೀವ್ರವಾದ ಪೆಟ್ಟುಬಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)