ಬಂಗಾಳ ಬಾಂಬ್ ಪ್ರಕರಣ : ಬಾಂಗ್ಲಾದೇಶೀಯನ ಬಂಧನ

j
Published on

ಕೊಲ್ಕತಾ: ಪಶ್ಚಿಮ ಬಂಗಾಳದ ರಾಜ್ಯ ಕಾರ್ಮಿಕ ಸಚಿವ ಜಾಕಿರ್ ಹುಸೇನ್ ಮೇಲೆ ನಡೆದ ಬಾಂಬ್ ಅಟ್ಯಾಕ್ ಸಂಬಂಧವಾಗಿ ಬಾಂಗ್ಲಾದೇಶದ ನಾಗರೀಕನೊಬ್ಬನನ್ನು ಕೊಲ್ಕತಾ ಸಿಐಡಿ ಬಂಧಿಸಿದೆ. ಮುರ್ಷಿದಾಬಾದ್​ನ ನಿಮ್​ತಿತಾ ರೈಲು ನಿಲ್ದಾಣದಲ್ಲಿ ಫೆಬ್ರವರಿ 17 ರ ರಾತ್ರಿ ನಡೆದ ಬಾಂಬ್ ದಾಳಿಯಲ್ಲಿ ಸಚಿವ ಹುಸೇನ್ ಮತ್ತು ಇತರ 20 ಜನರು ಗಾಯಗೊಂಡಿದ್ದರು.

ತೃಣಮೂಲ ಕಾಂಗ್ರೆಸ್​​ನ ನಾಯಕರಾದ ಜಾಕೀರ್ ಹುಸೇನ್ ಜನರೊಂದಿಗೆ ಮಾತನಾಡುತ್ತಾ ಕೋಲ್ಕತಾಗೆ ಹೋಗಲು ಇದೇ 17ರ ರಾತ್ರಿ 10 ಗಂಟೆಗೆ ಮುರ್ಷಿರಾಬಾದಿನ ರೈಲು ನಿಲ್ದಾಣದ ಪ್ಲಾಟ್​ಫಾರಂ ನಂಬರ್ 2 ತಲುಪಿದಾಗ, ಬಾಂಬ್ ಸ್ಫೋಟಗೊಂಡಿತ್ತು. ಐಈಡಿ ಬಳಸಿ ಮಾಡಿದ ಈ ಬಾಂಬ್ ದಾಳಿಯ ತನಿಖೆ ನಡೆಯುತ್ತಿದ್ದು, ಒಬ್ಬ ಬಾಂಗ್ಲಾದೇಶೀಯನನ್ನು ಬಂಧಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯಲ್ಲಿ ಗಾಯಗೊಂಡ ಸಚಿವರು ಮತ್ತು ಇತರರ ಚಿಕಿತ್ಸೆಯು ಕೊಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net