60ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ  ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್! Former BJP chief of West Bengal Dilip Ghosh Married At 60

Former BJP chief of West Bengal Dilip Ghosh
Published on
ಕೋಲ್ಕತ್ತಾ: ( Former BJP chief of West Bengal Dilip Ghosh Married At 60) 60 ವರ್ಷದ ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಪಕ್ಷದ ಸಹೋದ್ಯೋಗಿ ರಿಂಕು ಮಜುಂದಾರ್ ಅವರನ್ನು ಶುಕ್ರವಾರ ಆತ್ಮೀಯರ ಸಮ್ಮದಲ್ಲಿ ವಿವಾಹವಾದರು.

ಸಾಂಪ್ರದಾಯಿಕ ಬಂಗಾಳಿ ವಿವಾಹ ಉಡುಪನ್ನು ಧರಿಸಿದ ದಿಲೀಪ್ ಘೋಷ್ ಅವರ ಮನೆಯಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿತು. ಕೆಲವೇ ಕೆಲವು ಆಪ್ತರನ್ನಷ್ಟೇ ಅವರು ಆಹ್ವಾನಿಸಿದ್ದರು. ದಿಲೀಪ್ ಘೋಷ್ ಅವರ ತಾಯಿ ಗೋಪಿವಲ್ಲಭಪುರದಿಂದ ಈ ಮದುವೆಗಾಗಿ ಆಗಮಿಸಿದ್ದರು.

ದಿಲೀಪ್ ಘೋಷ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದು, ಸಂಘಕಾರ್ಯದ ಭಾಗವಾಗಿ ರಾಜಕೀಯಕ್ಕೆ ಬಂದವರು. ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿದ ಅವರು, ಮಾಜಿ ಸಂಸದರು ಕೂಡ. ಅವರಿಗೆ ರಿಂಕು ಮಜುಂದಾರ್ ಅವರು ಪಕ್ಷ ಸಂಘಟನೆ ವೇಳೆ ಪರಿಚಿತರಾಗಿದ್ದರು.

"ಎಲ್ಲರ ಶುಭ ಹಾರೈಕೆಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನನಗೆ ಶುಭ ಹಾರೈಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ನಾನು ಧನ್ಯವಾದ ಹೇಳುತ್ತೇನೆ. ನನ್ನ ವೈಯಕ್ತಿಕ ಜೀವನವು ನನ್ನ ರಾಜಕೀಯ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು  ದಿಲೀಪ್ ಘೋಷ್ ಸುದ್ದಿಗಾರರಿಗೆ ತಿಳಿಸಿದರು.

60 ವರ್ಷದ ದಿಲೀಪ್ ಘೋಷ್, ತನ್ನ ತಾಯಿಯ ಆಸೆಯನ್ನು ಈಡೇರಿಸಲು ಮದುವೆಯಾಗಲು ನಿರ್ಧರಿಸಿದ್ದಾಗಿ ಹೇಳಿದರು.

ಇಲ್ಲಿಯವರೆಗೆ ಅವಿವಾಹಿತರಾಗಿದ್ದರೂ, ಇದು ಮಜುಂದಾರ್ ಅವರ ಎರಡನೇ ವಿವಾಹವಾಗಿದ್ದು, ಅವರಿಗೆ ಮೊದಲಿನ ವಿವಾಹದಿಂದ ಒಬ್ಬ ಮಗನಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net