

ಮಂಗಳೂರು: ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಎಂಬಲ್ಲಿ ಕೆಂಪು ಮಳೆ ಬಂದು ನೀರು ನಿಂತಿರುವುದು ಕಂಡು ಬಂದಿದೆ.
ಇಲ್ಲಿನ ನಿವಾಸಿ ಸೂರ್ಯನಾರಾಯಣ ಭಟ್ ಅವರ ಮನೆಯಲ್ಲಿ ಬಕೆಟ್, ಡ್ರಮ್ ಗಳಲ್ಲಿ ಕೆಂಪು ನೀರು ತುಂಬಿಕೊಂಡಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಈ ನೀರನ್ನು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಪರಿಸರದಲ್ಲಿ ಒಂದೇ ಮನೆ ಇದ್ದು, ಒಂದು ಕಿ.ಮೀ.ದೂರದಲ್ಲಿ ಇರುವ ಶಿರ್ಲಾಲು ಪೇಟೆಯಲ್ಲಿ ಇಟ್ಟಿರುವ ಬಕೆಟ್ ನಲ್ಲಿ ಕೆಂಪು ನೀರು ಇರಲಿಲ್ಲ ಎಂದು ಅವರು ವಿಜಯವಾಣಿ ಗೆ ತಿಳಿಸಿದ್ದಾರೆ.