ಹಂಪಿಯಲ್ಲಿ ಆಂಧ್ರ ಸಹೋದರಿಯರ ಆತ್ಮಹತ್ಯೆ

01122020 Suside
Published on

ಬಳ್ಳಾರಿ: ಹಂಪಿ ರಥ ಬೀದಿಯಲ್ಲಿರುವ ಸಾಲು ಮಂಟಪದಲ್ಲಿ ಸೋಮವಾರ ಆಂಧ್ರ ಪ್ರದೇಶದ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಂತಪುರ ಜಿಲ್ಲೆ ರಾಯದುರ್ಗ ತಾಲೂಕಿನ ಮೀನಾಕ್ಷಿ (52) ಹಾಗೂ ಕಮಲಾ (50) ಮೃತರು. ಇಬ್ಬರೂ ನ.28ರಂದು ಮನೆಯಿಂದ ಹೊರಟಿದ್ದರು. ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಂಗಳವಾರ ಹಂಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net