ಕಾರು ಡಿಕ್ಕಿ ಹೊಡೆದು ಸೋಲಿಗ ವ್ಯಕ್ತಿ ಸಾವು: ಗೊರುಕನ ರೆಸಾರ್ಟ್​ ಬಳಿ ಸೋಲಿಗರ ಪ್ರತಿಭಟನೆ

Death
Published on

ಚಾಮರಾಜನಗರ: ಬಿಳಿಗಿರಿ ರಂಗನಬೆಟ್ಟದ ಬಳಿ ಇರುವ ಗೊರುಕನ ರೆಸಾರ್ಟ್​ಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಸೋಲಿಗ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

ಯರಕನಗದ್ದೆ ಪೋಡು ನಿವಾಸಿ ನಂಜೇಗೌಡ (38) ಮೃತಪಟ್ಟ ವ್ಯಕ್ತಿ.
ಬೆಂಗಳೂರಿನ ಪ್ರವಾಸಿಗರು ಗೊರುಕನ ರೆಸಾರ್ಟ್​ಗೆ ಆಗಮಿಸುತ್ತಿದ್ದರು. ಈ ವೇಳೆ ನಂಜೇಗೌಡ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ನಂಜೇಗೌಡ ಮೃತಪಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಯರಕನಗದ್ದೆ ಪೋಡು ನಿವಾಸಿಗಳು ರೆಸಾರ್ಟ್​ ಎದುರು ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಭೂಪರಿವರ್ತನೆ ರದ್ದು: ರೈಟ್ ಲೈವ್ಲಿಹುಡ್ ಪ್ರಶಸ್ತಿ ಪುರಸ್ಕೃತ ಡಾ.ಸುದರ್ಶನ್ ಮಾಲೀಕತ್ವದ ಜಮೀನಿನಲ್ಲಿ ರೆಸಾರ್ಟ್ ನಿರ್ಮಾಣವಾಗಿದೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಮೀನು ಇರುವುದರಿಂದ ರೆಸಾರ್ಟ್​ ನಿರ್ಮಾಣಕ್ಕೆ ಮಾಡಿದ್ದ ಭೂ ಪರಿವರ್ತನೆಯನ್ನು ಜಿಲ್ಲಾಧಿಕಾರಿ ಇತ್ತೀಚೆಗೆ ರದ್ದುಪಡಿಸಿದ್ದಾರೆ. ಪರಿಸರ ಶಿಕ್ಷಣ, ಆಯುರ್ವೇದ ಚಿಕಿತ್ಸಾ ಕೇಂದ್ರದ ಹೆಸರಿನಲ್ಲಿ ರೆಸಾರ್ಟ್​ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಲಾಗಿತ್ತು. ಇದೇ ರೆಸಾರ್ಟ್​ ಬಳಿ ಈಗ ಅಪಘಾತ ಸಂಭವಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net