ನನಗೆ ಕೋವಿಡ್​-19 ಬಂದಿದೆ ಎಂದು ಹಾಡು ಹೇಳುತ್ತಾ ಆಸ್ಪತ್ರೆಯ ವಾರ್​ರೂಂನಲ್ಲಿ ನರ್ತಿಸಿದ ಸೋಂಕಿತ ವ್ಯಕ್ತಿ

Coronavirus 16 Feb 20
Published on

ಬೆಳಗಾವಿ: ಕರೊನಾ ವೈರಸ್​ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿ ನನಗೆ ಕೋವಿಡ್​-19 ಬಂದಿದೆ ಎಂದು ಹಾಡು ಹೇಳುತ್ತಾ ಆಸ್ಪತ್ರೆಯ ವಾರ್ಡ್​ನಲ್ಲಿ ನರ್ತನ ಮಾಡಿ ಆಕ್ರೋಶಕ್ಕೆ ಕಾರಣವಾಗಿದ್ದಾನೆ.

ಈತ ದೆಹಲಿ ನಿಜಾಮುದ್ದೀನ್​ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಬೆಳಗಾಗಿವಿಗೆ ಹಿಂತಿರುಗಿದ್ದ. ನಿಜಾಮುದ್ದೀನ್​ ಸಭೆಯಲ್ಲಿ ಪಾಲ್ಗೊಂಡ ಬಹುತೇಕ ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈತನನ್ನು ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲಾಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರನ್ನು ದಾಖಲಿಸಲಾಗಿದೆ. ಓರ್ವ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಮತ್ತೊಬ್ಬ ಕೈಮುಗಿದು ನನಗೆ ಕೋವಿಡ್​-19 ಸೋಂಕು ಬಂದಿದೆ ಎನ್ನುತ್ತಾ ಡ್ಯಾನ್ಸ್​ ಮಾಡುತ್ತಾನೆ.

ಇವರ ಈ ವರ್ತನೆ ವಾರ್ಡ್​ನಲ್ಲಿರುವ ಇತರರಿಗೆ, ವೈದ್ಯರಿಗೆ ಬೇಸರ ಮೂಡಿಸಿದೆ. ಅಲ್ಲದೆ ಸಾರ್ವಜನಿಕರು ಕೂಡ ಇವರ ವಿರುದ್ಧ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇವರಲ್ಲಿ ಕೆಲವರು ನಮಗೆ ಸೋಂಕು ಹರಡಿರುವುದು ದೃಢಪಟ್ಟರೂ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net