ಮತ್ತೆ ಮುನ್ನಡೆಗೆ ಬಂದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ: ಬೆಳಗಾವಿಯಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ

sathish jarakiholi- mangala angadi
Published on

ಬೆಳಗಾವಿ: ಬೆಳಗಾವಿ ಲೋಕಸಭೆ ಉಪಚುನಾವಣೆ ಫಲಿತಾಂಶದ ಮತ ಎಣಿಕೆ ಇನ್ನೂ ಕೂಡ ಮುಂದುವರೆದಿದ್ದು ಕ್ಷಣ ಕ್ಷಣಕ್ಕೂ ಭಾರೀ ಕುತೂಹಲ ಕೆರಳಿಸಿದೆ.

84 ನೇ ಸುತ್ತಿನ ಮತ ಎಣಿಕೆ ನಂತರ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ಸುಮಾರು 3000 ಮತಗಳ ಅಂತರದ ಮುನ್ನಡೆಗೆ ಜಿಗಿದಿದ್ದಾರೆ.

ಸತತ 30 ಸುತ್ತುಗಳ ಮತ ಎಣಿಕೆಯವರೆಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಆರಂಭದಲ್ಲಿ 10 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದ ಸತೀಶ್ ಅವರು ಬರು ಬರುತ್ತಾ ಕುಸಿಯುತ್ತಾ ಬಂದರು.

ಇನ್ನು 8 ಸುತ್ತಿನ ಮತ ಎಣಿಕೆ ಬಾಕಿ ಇದ್ದು, ಫಲಿತಾಂಶ ಭಾರೀ ಕುತೂಹಲ ಕೆರಳಿಸಿದೆ. ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಇನ್ನೇನು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net