ಬೆಂಗಳೂರು:
ದೇಶದ ನವರತ್ನ ಕಂಪನಿಗಳಲ್ಲಿ ಒಂದಾದ ಡಿಫೆನ್ಸ್ ಪಿಎಸ್‌ಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ರೂ. ಗೋವಾ ಶಿಪ್‌ಯಾರ್ಡ ಲಿಮಿಟೆಡ್‌ನಿಂದ 2,673 ಕೋಟಿ ರೂ ಮೌಲ್ಯದ ಆರ್ಡರ್ ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಡಿ.15, 2023 ರಂದು ಕಂಪನಿಯು ರೂ 86.15 ಕೋಟಿ ಮೌಲ್ಯದ ಹೆಚ್ಚುವರಿ ಆರ್ಡರ್‌ಗಳನ್ನು ಸ್ವೀಕರಿಸಿದೆ ಮತ್ತು ಈ ಆದೇಶಗಳು ವಿವಿಧ ಬಿಡಿಭಾಗಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ್ದಾಗಿದೆ. ಬಿಇಎಲ್ ಒಟ್ಟು 2,759.15 ಕೋಟಿ ಮೌಲ್ಯದ ಆರ್ಡರ್ ಪಡೆದಿರುವುದು ಗಮನಾರ್ಹ.
ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಇಂಜಿನಿಯರ್‌ಗಳ (ಮೌಲ್ಯ: ರೂ. 972 ಇ್ಟ) ಮುಂದಿನ ಪೀಳಿಗೆಯ ಕಡಲಾಚೆಯ ಗಸ್ತು ಹಡಗುಗಳಲ್ಲಿ (ಘೆಎಕ್ಖೃ) ಬಳಕೆಗಾಗಿ 14 ವಿಧದ ಸಂವೇದಕಗಳ ಪೂರೈಕೆಗೆ ಇದು ಸಂಬಂದಿಸಿದ್ದಾಗಿದೆ.
ಬಿಇಎಲ್ ನ ಉಪ-ಮಾರಾಟಗಾರರಾದ ಖಉಗಳು ಸೇರಿದಂತೆ ಎಲೆಕ್ಟ್ರಾನಿಕ್ಸ್ ಮತ್ತು ಸಂಬಂಧಿತ ಉದ್ಯಮಗಳ ಭಾಗವಹಿಸುವಿಕೆಯನ್ನು ಹೊಂದಿರುತ್ತದೆ. ಬಿಇಎಲ್ ತಯಾರಿಸಿದ ಉಪಕರಣಗಳು ’ಆತ್ಮನಿರ್ಭರ್ ಭಾರತ್’ ಕಾರ್ಯಕ್ರಮದ ಭಾಗವಾಗಿರುವುದು ವಿಶೇಷ.
ಬಿಇಎಲ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 25,935.15 ಕೋಟಿ ರೂ. ಮೌಲ್ಯದ ಸಂಚಿತ ಆರ್ಡ್‌ರ್ ಆದೇಶಗಳನ್ನು ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.