ವರದಕ್ಷಿಣೆ ಕಿರುಕುಳ; ಸೊಸೆಗೆ ಆ್ಯಸಿಡ್ ಕುಡಿಸಿ ಕೊಂದ ಅತ್ತೆ

wedding
ಸಾಂದರ್ಭಿಕ ಚಿತ್ರ
Published on

ಉತ್ತರಪ್ರದೇಶ: ಮದುವೆಯಾಗಿ ಪತಿ ಮನೆಗೆ ಬರುವಾಗ ಹಣ, ಕಾರು, ಬಂಗಲೆ ಜೊತೆಗೆ ಸೊಸೆ ಬರಬೇಕು ಎಂದು ಕೆಲವು ವರನ ಕುಟುಂಬಸ್ಥರು ಬಯಸುತ್ತಾರೆ. ಇಂದು ವರದಕ್ಷಣೆ ಕುರುಕುಳಕ್ಕೆ ಹೆಚ್ಚಿನ ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಾರೆ. ಇಲ್ಲೊಬ್ಬಳು ಅತ್ತೆ ವರದಕ್ಷಿಣೆ ನೀಡದ್ದಕ್ಕೆ ಸೊಸೆಗೆ ಆ್ಯಸಿಡ್ ಕುಡಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಅಂಜುಮ್ (25) ಮೃತ ಮಹಿಳೆ. ಈಕೆ ಉತ್ತರ ಪ್ರದೇಶದ ಉಡಾಲ ಜಾಗೀರ್ ಗ್ರಾಮದ ನಿವಾಸಿ. ವರನ ಕುಟುಂಬಸ್ಥರು ಅಂಜುಮ್ ಪೋಷಕರಿಗೆ ಮದುವೆ ಸಮಯದಲ್ಲಿ 2.50 ಲಕ್ಷ ರೂ. ನಗದು ಹಾಗೂ ಕಾರನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಅಂಜುಮ್ ಪೋಷಕರು ಅದನ್ನು ನೀಡುವಲ್ಲಿ ವಿಫಲವಾದ್ದರಿಂದ ಆಕೆಯ ಅತ್ತೆ ಕೋಪದಲ್ಲಿ ಆ್ಯಸಿಡ್ ಕುಡಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

'6 ವರ್ಷಗಳ ಹಿಂದೆ ಉಡಾಲ ಜಾಗೀರ್ ಗ್ರಾಮದ ಇಲಿಯಾಸ್ ಎಂಬಾತನನ್ನು ಅಂಜುಮ್ ಮದುವೆಯಾಗಿದ್ದಳು. 15 ದಿನಗಳ ಹಿಂದೆ ಅಂಜುಮ್ ತನ್ನ ಪೋಷಕರ ಮನೆಗೆ ಭೇಟಿ ನೀಡಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ. 2.50 ಲಕ್ಷ ರೂ. ನಗದು ಮತ್ತು ಕಾರು ನೀಡುವಂತೆ ಒತ್ತಾಯಿಸುತ್ತಿದ್ದಾರೆ' ಎಂದು ತಿಳಿಸಿದ್ದಳು ಎಂದು ಆಕೆಯ ಸಹೋದರಿ ಹೇಳಿದ್ದಾಳೆ.

ಘಟನೆಗೆ ಸಂಬಂಧಿಸಿ ಅಂಜುಮ್ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ ಹಾಗೂ ಅತ್ತೆ ವಿರುದ್ಧ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net