ಜೇಬಿನಲ್ಲಿ ಲಕ್ಷಗಟ್ಟಲೆ ಹಣವಿದ್ದರೂ ಹಸಿವಿನಿಂದ ಪ್ರಾಣ ಬಿಟ್ಟ ಭಿಕ್ಷುಕ; ಕಾರಣ ನಿಗೂಢ

money
Published on

ಸೂರತ್: ಲಕ್ಷಗಟ್ಟಲೆ ಹಣ  ಕೈಲಿ ಇದ್ದರು ಭಿಕ್ಷುಕ ಹಸಿವಿನಿಂದ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಚಿಕಿತ್ಸೆ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಅವರ ಸಾವಿಗೆ ಹಸಿವು ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೃತನ ಬಳಿ ಸುಮಾರು ರೂ.1.14 ಲಕ್ಷ ನಗದು ಪತ್ತೆಯಾಗಿದೆ. ಇಷ್ಟು ಹಣವಿದ್ದರೂ ಹಸಿವಿನಿಂದ ಸಾಯಲು ಕಾರಣವೇನು? ಅವನಿಗೆ ಆ ಹಣ ಹೇಗೆ ಬಂತು? ಹೀಗೆ ಹಲವು ಪ್ರಶ್ನೆಗಳು ಪೊಲೀಸರನ್ನು ಕಾಡುತ್ತಿವೆ.

ನಡೆದಿದ್ದೇನು?: ಕಳೆದ ಎರಡು ದಿನಗಳಿಂದ ಗಾಂಧಿ ಗ್ರಂಥಾಲಯದ ಬಳಿ ಭಿಕ್ಷುಕನೊಬ್ಬ ರಸ್ತೆಬದಿ ಬಿದ್ದಿರುವುದನ್ನು ಅಂಗಡಿ ಮಾಲೀಕರು ಗಮನಿಸಿದ್ದಾರೆ. ಹೀಗಾಗಿ 108ಕ್ಕೆ ಕರೆ ಮಾಡಿ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.ಪ್ರಾಥಮಿಕ ಪರೀಕ್ಷೆಯ ನಂತರ ಅವರನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. 

ವೃದ್ಧನನ್ನು ಆಸ್ಪತ್ರೆಗೆ ಕರೆತಂದಾಗ ಚಹಾ ಕೊಡಿ ಎಂದು ಕೇಳಿದರು. ಅವನು ಹಸಿದಿದ್ದಾನೆ ಮತ್ತು ಅವನ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ನಾವು ಚಿಕಿತ್ಸೆಯನ್ನು ಪ್ರಾರಂಭಿಸಿದ್ದೇವು. ಆದರೆ ಒಂದು ಗಂಟೆಯ ನಂತರ ಚಿಕಿತ್ಸೆ ಪಡೆಯುತ್ತಿದ್ದಾಗ ಭಿಕ್ಷುಕ ಮೃತಪಟ್ಟಿದ್ದಾನೆ. ಕಳೆದ ಎರಡು ದಿನಗಳಿಂದ ಏನನ್ನೂ ತಿನ್ನದೇ ಹಸಿವಿನಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ತಿಳಿಸಿದ್ದಾರೆ. ಭಿಕ್ಷುಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಆತನ ಫೋಟೋ ತೆಗೆದು ಬೇರೆ ಬೇರೆ ಕಡೆ ಕಳುಹಿಸಿದ್ದಾರೆ. ವ್ಯಕ್ತಿಯ ಸಾವಿನ ನಂತರ ಪೊಲೀಸರು ಆತನಿಂದ ರೂ.1.14 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. 500 ರೂ. ಮುಖಬೆಲೆಯ ನೋಟುಗಳು, 83 ರೂ. 200 ನೋಟುಗಳು, ರೂ. 537 100 ಕರೆನ್ಸಿ ನೋಟುಗಳು, ರೂ. 20, ರೂ. 10ರ ಕರೆನ್ಸಿ ನೋಟುಗಳಿವೆ. ಈ ಎಲ್ಲಾ ನೋಟುಗಳನ್ನು ಸಣ್ಣ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಅವರ ಸ್ವೆಟರ್ ಪಾಕೆಟ್ ಮತ್ತು ಪ್ಯಾಂಟ್ ಪಾಕೆಟ್‌ಗಳಲ್ಲಿ ಇರಿಸಲಾಗಿತ್ತು.  ಇಷ್ಟೊಂದು ಹಣ ಇದ್ದರು ವೃದ್ಧ ಯಾಕೆ ಏನು ತಿನ್ನದೆ ಹಸಿವಿನಿಂದ ಪ್ರಾಣ ಬಿಟ್ಟ ಎನ್ನುವುದು ಪೊಲೀಸರಿಗೆ ಅನುಮಾನ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net