

Oyo Room : ಅನೇಕ ಜನರು ಓಯೋ ರೂಮ್‌ಗಳನ್ನು ಬುಕ್ ಮಾಡುತ್ತಾರೆ. ಆದರೆ, ಓಯೋ ರೂಮ್‌ಗಳನ್ನು ಬುಕ್ ಮಾಡುವಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳಿವೆ ಎಂಬುದನ್ನು ಮರೆಯಬಾರದು. ಈ ಓಯೋ ರೂಮ್ಗಳು ಸುರಕ್ಷಿತವಾಗಿವೆ ಎಂದು ಹೋಟೆಲ್ನವರು ಹೇಳಿದರೂ ರೂಮ್‌ಗಳನ್ನು ಪರಿಶೀಲಿಸುವುದು ತುಂಬಾ ಮುಖ್ಯವಾಗಿದೆ.
ಅಂದಹಾಗೆ ಓಯೋ ರೂಮ್‌ಗಳನ್ನು ಹೆಚ್ಚಾಗಿ ಭಾರತದಲ್ಲಿ ಯುವಕರು ಬಳಸುತ್ತಾರೆ. ಏಕೆಂದರೆ, ಈ ರೂಮ್ಗಳ ಬಾಡಿಗೆ ತುಂಬಾ ಕಡಿಮೆ. ಇದನ್ನು 2012 ರಲ್ಲಿ ರಿತೇಶ್ ಅಗರ್ವಾಲ್ ಸ್ಥಾಪಿಸಿದರು. 80 ದೇಶಗಳಲ್ಲಿ 800ಕ್ಕೂ ಹೆಚ್ಚು ನಗರಗಳಲ್ಲಿ ಓಯೋ ಕಾರ್ಯನಿರ್ವಹಿಸುತ್ತದೆ. 10 ಲಕ್ಷಕ್ಕೂ ಹೆಚ್ಚು ರೂಮ್ಗಳಿವೆ. ಪ್ರತಿದಿನ ಲಕ್ಷಾಂತರ ಮಂದಿ ಈ ರೂಮ್‌ಗಳನ್ನು ಬುಕ್ ಮಾಡುತ್ತಾರೆ. ಆದರೆ, ಈ ರೂಮ್ಗಳು ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಲು ಕೆಲವು ವಿಧಾನಗಳಿವೆ ಎಂದು ಸ್ವತಃ ಓಯೊ ಆಡಳಿತ ಮಂಡಳಿ ಹೇಳುತ್ತದೆ. ಅವುಗಳು ಯಾವುವು ಎಂಬುದನ್ನು ನಾವೀಗ ನೋಡೋಣ.
ಯಾವುದೇ ಹೋಟೆಲ್‌ನಲ್ಲಿ ಉಳಿಯುವ ಮೊದಲು ಯಾವಾಗಲೂ ಎಲ್ಲ ಲೈಟ್ಗಳನ್ನು ಆಫ್ ಮಾಡಿ, ಮೊಬೈಲ್ ಫೋನ್ ಕ್ಯಾಮೆರಾದೊಂದಿಗೆ ಎಲ್ಲ ಸ್ಥಳಗಳನ್ನು ಸಹ ಪರಿಶೀಲಿಸಿ. ಅವುಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಡುವ ಸಾಧ್ಯತೆಯಿದೆ. ಲೈಟ್ ಆಫ್ ಮಾಡಿ ನೋಡುವಾಗ ಏನಾದರೂ ಕೆಂಪು ಲೈಟ್ಸ್ ಕಂಡರೆ ಹುಷಾರಾಗಿರಿ.
ಇನ್ನು ಲೈಟ್‌ಗಳು, ಹೀಟರ್‌ಗಳು, ಟಿವಿಯಂತಹ ವಿದ್ಯುತ್ ಉಪಕರಣಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಕೋಣೆಯಲ್ಲಿ ಎಲ್ಲಿಯಾದರೂ ಕನ್ನಡಿ ಇದೆಯೇ ಎಂದು ಪರಿಶೀಲಿಸಿ. ಇದ್ದರೆ ಅದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ. ಇದಿಷ್ಟೇ ಅಲ್ಲದೆ, ಬೇರೆ ಯಾರಾದರೂ ರೂಮ್ ಒಳಗೆ ಇದ್ದಾರೆಯೇ ಎಂದು ಪರಿಶೀಲಿಸಿ. ಯಾವುದೇ ವಾರಂಟ್‌ಗಳಿಲ್ಲದೆ ಓಯೋನಲ್ಲಿ ನೋಂದಾಯಿಸಲಾದ ಹೋಟೆಲ್‌ಗಳನ್ನು ಪೊಲೀಸರು ಹುಡುಕಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಯಾರೂ ನಿಮ್ಮನ್ನು ಬಂಧಿಸಲು ಸಾಧ್ಯವಿಲ್ಲ.
ಈ ಹಿಂದೆ ಹೈದರಾಬಾದ್ ಉಪನಗರ ಶಂಶಾಬಾದ್‌ನಲ್ಲಿರುವ ಸೀತಾ ಗ್ರ್ಯಾಂಡ್ ಓಯೋ ಹೋಟೆಲ್‌ನಲ್ಲಿ ರಹಸ್ಯ ಕ್ಯಾಮೆರಾಗಳು ಪತ್ತೆಯಾಗಿರುವ ಸುದ್ದಿ ಭಾರಿ ಸಂಚಲನ ಮೂಡಿಸಿತ್ತು. ಪೊಲೀಸರ ಪ್ರಕಾರ, ಒಂಗೋಲ್ ಮೂಲದ ಗಣೇಶ್ ಎಂಬವರು ಓಯೋ ಹೋಟೆಲ್ ನಡೆಸುತ್ತಿದ್ದಾರೆ. ಮಲಗುವ ಕೋಣೆಗಳಲ್ಲಿರುವ ಬಲ್ಬ್‌ಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟು ದಂಪತಿ ಅಥವಾ ಪ್ರೇಮಿಗಳ ಸರಸ ಸಲ್ಲಾಪ ದೃಶ್ಯಗಳನ್ನು ಸೆರೆಹಿಡಿದಿರುವ ಗಂಭೀರ ಆರೋಪ ಕೇಳಿಬಂದಿತ್ತು. ವಿಡಿಯೋ ಸೆರೆಹಿಡಿದ ಬಳಿಕ ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದು, ಹಣ ಕೊಡದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಹೆದರಿಸಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಕ್ಯಾಮೆರಾಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಿದ್ದರು. ಹೀಗಾಗಿ ಓಯೋ ರೂಮ್ ಬುಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಹಣದ ಜತೆ ಮಾನ ಮರ್ಯಾದೆಯೂ ಹೋಗಬಹುದು. (ಏಜೆನ್ಸೀಸ್)