ಹಾರ್ಟ್​ ಚೆಕಪ್​ಗೂ ಕರೊನಾ ಸೋಂಕಿನ ಭಯ.. ಹೃದಯ ಜೋಪಾನ...

heart
Published on

ನವದೆಹಲಿ: ಜಗತ್ತನ್ನೇ ಆತಂಕಕ್ಕೆ ಒಡ್ಡಿರುವ ಕರೊನಾ ಸೋಂಕು ಹೃದ್ರೋಗಿಗಳು ರೆಗ್ಯುಲರ್ ಚೆಕಪ್​ಗೆ ಹೋಗುವುದಕ್ಕೂ ಭಯ ಪಡುವಂಥ ವಾತಾವರಣ ಸೃಷ್ಟಿಸಿದೆ. ಇದು ಹೃದ್ರೋಗಿಗಳ ಆರೋಗ್ಯಕ್ಕೆ ಹಾನಿಕಾರಕ ಎಂಬುದಾಗಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವ ಹೃದಯ ದಿನದ ಹಿನ್ನೆಲೆಯಲ್ಲಿ ಈ ಬಗ್ಗೆ ಮಾತನಾಡಿರುವ ತಜ್ಞರನೇಕರು, ಕರೊನಾ ಸಂದರ್ಭದಲ್ಲಿ ಹೃದ್ರೋಗಿಗಳಿಗೆ ಅಪಾಯ ಹೆಚ್ಚು. ಏಕೆಂದರೆ ನಿಯಮಿತ ತಪಾಸಣೆ, ತುರ್ತು ಸಂದರ್ಭದಲ್ಲಿ ಹೃದಯ ತಪಾಸಣೆಗೆ ತೆರಳಬೇಕಾಗಿರುವ ರೋಗಿಗಳು ಸೋಂಕು ತಗುಲೀತು ಎಂಬ ಭಯಕ್ಕೆ ವೈದ್ಯರಲ್ಲಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ತಪ್ಪಿಸುವ ಸಾಧ್ಯತೆ ಇದ್ದಾಗ್ಯೂ ಹೃದ್ರೋಗಿಗಳು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಸ್ಪೆಷಲಿಸ್ಟ್​ಗಳ ಅಭಿಪ್ರಾಯ.

ಕೋವಿಡ್​ ಸಂದರ್ಭದಲ್ಲಿ ಹೃದಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾದ್ದು ಅಗತ್ಯ. ಔಷಧಗಳನ್ನು ತಪ್ಪದೆ ಸಮಯಕ್ಕೆ ಸರಿಯಾಗಿ ಸೇವಿಸಬೇಕು. ಒಳ್ಳೆಯ ಆಹಾರ, ಆರೋಗ್ಯಕರ ಜೀವನಶೈಲಿ, ದಿನಕ್ಕೆ ಕನಿಷ್ಠ ಅರ್ಧ-ಮುಕ್ಕಾಲು ಗಂಟೆ ಸಾಧಾರಣ ವ್ಯಾಯಾಮ ಮಾಡಬೇಕು ಎಂದು ತಜ್ಞವೈದ್ಯರು ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net