53ರ ಹರೆಯದಲ್ಲೂ ಕರಗದ ಸೌಂದರ್ಯ: ಇಲ್ಲಿದೆ ಐಶ್ವರ್ಯಾ ರೈ ಅವರ ಸಿಂಪಲ್ ಬ್ಯೂಟಿ ಸೀಕ್ರೆಟ್! | Aishwarya Rai beauty secrets

Aishwarya Rai beauty secrets
ವಯಸ್ಸು 53 ಆದ್ರೂ ಮಿಂಚುವ ಐಶ್ವರ್ಯಾ ರೈ
Published on: 

Aishwarya Rai Birthday: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ನವೆಂಬರ್ 1ರಂದು 53ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಬೆಳ್ಳಿಪರದೆ, ಫ್ಯಾಷನ್ ಶೋ ಹಾಗೂ ರೆಡ್ ಕಾರ್ಪೆಟ್‌ಗಳಲ್ಲಿ ತಮ್ಮ ಸೌಂದರ್ಯ ಮತ್ತು ಆತ್ಮವಿಶ್ವಾಸದ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಗೆದ್ದಿರುವ ಐಶ್ವರ್ಯಾ, ಈ ವಯಸ್ಸಿನಲ್ಲೂ ತಮ್ಮ ನೈಸರ್ಗಿಕ ಹೊಳಪನ್ನು ಹಾಗೆಯೇ ಕಾಯ್ದುಕೊಂಡಿದ್ದಾರೆ.

ತಮ್ಮ ಈ ಸೌಂದರ್ಯದ ರಹಸ್ಯವೇನು ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಅವರ ಪ್ರಕಾರ, ಸೌಂದರ್ಯಕ್ಕೆ ದುಬಾರಿ ಪ್ರಾಡಕ್ಟ್‌ಗಳಿಗಿಂತ ಸರಳ ಹಾಗೂ ಸಹಜ ಜೀವನಶೈಲಿಯ ಅಭ್ಯಾಸಗಳೇ ಮುಖ್ಯ.

ದೇಹವನ್ನು ಹೈಡ್ರೇಟ್ ಆಗಿಡುವುದು ಮತ್ತು ನೈರ್ಮಲ್ಯ

ಐಶ್ವರ್ಯಾ ಅವರ ಮೊದಲ ಆದ್ಯತೆಯೇ ದೇಹವನ್ನು ಹೈಡ್ರೇಟ್ ಆಗಿಡುವುದು ಹಾಗೂ ನೈರ್ಮಲ್ಯ ಕಾಯ್ದುಕೊಳ್ಳುವುದು. ‘ನಾವೆಲ್ಲರೂ ಪ್ರತಿದಿನ ಸಮಯದ ಜೊತೆ ಓಡುತ್ತಿರುತ್ತೇವೆ. ಹಾಗಾಗಿ, ದೇಹವನ್ನು ಹೈಡ್ರೇಟ್ ಆಗಿಡುವುದು ಮತ್ತು ಸ್ವಚ್ಛವಾಗಿರುವುದೇ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಮಾರ್ಗ’ ಎನ್ನುತ್ತಾರೆ ಅವರು.

ಆಂತರಿಕ ಸ್ವಚ್ಛತೆ ಮುಖ್ಯ

‘ಮನಸ್ಸು ಮತ್ತು ದೇಹ ಆಂತರಿಕವಾಗಿ ಸ್ವಚ್ಛವಾಗಿದ್ದರೆ, ಬಾಹ್ಯ ಸೌಂದರ್ಯ ತಾನಾಗಿಯೇ ಹೊಳೆಯುತ್ತದೆ’ ಎನ್ನುತ್ತಾರೆ ಐಶ್ವರ್ಯಾ. ಯುವಜನತೆಗೆ ಅವರು ನೀಡುವುದು ಒಂದೇ ಮುಖ್ಯ ಸಲಹೆ ಎಂದರೆ, ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ.

ದಿನಕ್ಕೆ ಎರಡು ಬಾರಿ ಮೊಯಿಶ್ಚರೈಸಿಂಗ್

ತಮ್ಮ ಸ್ಕಿನ್ ಕೇರ್ ರೂಟಿನ್‌ನಲ್ಲಿ ಅವರು ಎಂದಿಗೂ ಮರೆಯದ ಅಭ್ಯಾಸವೆಂದರೆ ಮೊಯಿಶ್ಚರೈಸಿಂಗ್. ಕೆಲಸ ಇರಲಿ ಅಥವಾ ರಜೆ ಇರಲಿ, ದಿನದ ಬೆಳಿಗ್ಗೆ ಮತ್ತು ರಾತ್ರಿ ಮೊಯಿಶ್ಚರೈಸರ್ ಹಚ್ಚುವುದು ಅವರ ದೈನಂದಿನ ಜೀವನದ ಭಾಗವಾಗಿದೆ.

ಇದನ್ನೂ ಓದಿ: ಶ್ವಾಸಕೋಶದ ಕಾವಲು ಕಾಯುತ್ತೆ ಈ ಜೈವಿಕ ಕವಚ: ಮೂಗಿನ ಒಳಗೆ ಏನೆಲ್ಲಾ ನಡೆಯುತ್ತೆ ಗೊತ್ತಾ? | Nose defense system

ಒಟ್ಟಿನಲ್ಲಿ, ಬ್ಯುಸಿ ಜೀವನದ ನಡುವೆಯೂ ನಮ್ಮ ದೇಹ ಮತ್ತು ತ್ವಚೆಯ ಬಗ್ಗೆ ಕಾಳಜಿ ವಹಿಸುವುದು, ನಮ್ಮತನವನ್ನು ಪ್ರೀತಿಸುವುದೇ ಆಂತರಿಕ ಸೌಂದರ್ಯಕ್ಕೆ ನಿಜವಾದ ದಾರಿ ಎಂಬುದನ್ನು ಐಶ್ವರ್ಯಾ ರೈ ಅವರ ಈ ಸರಳ ಅಭ್ಯಾಸಗಳು ನಿರೂಪಿಸುತ್ತವೆ.