ಏರ್​​​ಪೋರ್ಟ್​ ರನ್‌ವೇಯಲ್ಲಿ ಕರಡಿ ಓಡಾಟ: 12 ವಿಮಾನ ಹಾರಾಟಕ್ಕೆ ವಿಳಂಬ | Video Viral

Video Viral
Published on

Video Viral: ವಿಮಾನ ನಿಲ್ದಾಣದ ರನ್‌ವೇಯಲ್ಲಿ ಕರಡಿಯೊಂದು ವೇಗವಾಗಿ ಓಡುತ್ತಿರುವುದು ಅಪರೂಪದ ಘಟನೆ ಗುರುವಾರ (ಜೂ.26) ಜಪಾನ್‌ನ ಯಮಗಾಟಾದಲ್ಲಿ ನಡೆದಿದೆ.

ರನ್‌ವೇಯಲ್ಲಿ ಹಠಾತ್ ಕರಡಿ ಕಾಣಿಸಿಕೊಂಡಿದ್ದರಿಂದ ವಿಮಾನ ಪ್ರಯಾಣದಲ್ಲಿ ಅಡಚಣೆ ಉಂಟಾಗಿ, ಒಂದು 12 ವಿಮಾನಗಳು ರದ್ದಾದವು. ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನ ನಿಲ್ದಾಣದ ಸಿಬ್ಬಂದಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು.

ಯಮಗಾಟಾ ಪ್ರಿಫೆಕ್ಚರ್‌ನ ಹಿಗಾಶಿನ್‌ನಲ್ಲಿರುವ ಯಮಗಾಟಾ ವಿಮಾನ ನಿಲ್ದಾಣದ ಉದ್ಯೋಗಿಯೊಬ್ಬರು ಬೆಳಿಗ್ಗೆ ರನ್‌ವೇಯಲ್ಲಿ ಕರಡಿ ವೇಗವಾಗಿ ಓಡುತ್ತಿರುವುದನ್ನು ಮೊದಲು ಗಮನಿಸಿದ್ದಾರೆ, ಇದರ ಪರಿಣಾಮವಾಗಿ ರನ್‌ವೇ ತಾತ್ಕಾಲಿಕವಾಗಿ ಮುಚ್ಚಿದರು, ಹೀಗಾಗಿ ರನ್‌ವೇಯಲ್ಲಿ 10 ಕ್ಕೂ ಹೆಚ್ಚು ವಿಮಾನಗಳ ಮೇಲೆ ಪರಿಣಾಮ ಬೀರಿತು.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ 4 ಅಡಿ ಉದ್ದದ ಪುಟ್ಟ ಕರಡಿ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಓಡುತ್ತಿದ್ದು, ನಂತರ ವಿಮಾನ ನಿಲ್ದಾಣದ ಕಾರನ್ನು ರನ್‌ವೇಯಿಂದ ದೂರ ಸರಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ.

ಮಧ್ಯಾಹ್ನದ ಸುಮಾರಿಗೆ ಕರಡಿ ರನ್‌ವೇಯಲ್ಲಿ ಹಿಂತಿರುಗಿದ ಪರಿಣಾಮವಾಗಿ 12 ವಿಮಾನಗಳ ಹಾರಾಟ ರದ್ದಾಯಿತು. ವಿಮಾನ ನಿಲ್ದಾಣದ ಪ್ರದೇಶದಲ್ಲಿ ಬೇಟೆಗಾರರು ಕರಡಿಗೆ ಬಲೆ ಸಿದ್ಧಪಡಿಸಲು ಬಂದಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net