ಸತತ ಗೆಲುವಿನ ನಂತರ ಮತ್ತೆ ವಿಶ್ವದ ನಂ. 1 ಸ್ಥಾನಕ್ಕೆ ಮರಳಿದ ನೀರಜ್ ಚೋಪ್ರಾ| Javelin Throw Rankings

niraj chopra
Published on

Javelin Throw Rankings: ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತೊಮ್ಮೆ ವಿಶ್ವದ ನಂ. 1 ಶ್ರೇಯಾಂಕದ ಜಾವೆಲಿನ್ ಎಸೆತಗಾರರಾಗಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ ಶ್ರೇಯಾಂಕದಲ್ಲಿ ಕುಸಿದ ಕಂಡಿದ್ದ ನೀರಜ್ ಚೋಪ್ರಾ ಇದೀಗ ಮತ್ತೊಮ್ಮೆ ವಿಶ್ವದ ನಂಬರ್ 1 ಜಾವೆಲಿನ್ ಎಸೆತಗಾರ ಪಟ್ಟವನ್ನು ಪಡೆದುಕೊಂಡಿದ್ದಾರೆ. ಆಂಡರ್ಸನ್ ಪೀಟರ್ಸ್ ಅವರನ್ನು ಹಿಂದಿಕ್ಕಿ 1445 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಜು.5ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ನೀರಜ್‌ ಚೋಪ್ರಾ ಕ್ಲಾಸಿಕ್‌ ಜಾವೆಲಿನ್‌ ಎಸೆತ ಸ್ಪರ್ಧೆ ನೋಡಬೇಕೆಂಬ ಅಭಿಮಾನಿಯ ಬಯಕೆಯನ್ನು ನೀರಜ್‌ ಚೋಪ್ರಾ ಈಡೇರಿಸಿದ್ದಾರೆ. ಹಾಗಾಗಿ ರಾಜ್ಯ ರಾಜಧಾನಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅವರ ಪ್ರದರ್ಶನ ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ.

ಇನ್ನೂ ಈ ಬಗ್ಗೆ ತಮಿಳುನಾಡಿನ ರಂಜಿತ್‌ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಯಾರಾದರೂ ನನಗೆ ರೂ.2000 ನೀಡಿದರೆ ಕೊಯಂಬತ್ತೂರಿನಿಂದ ಬೆಂಗಳೂರಿಗೆ ಹೋಗಿ ನೀರಜ್‌ ಚೋಪ್ರಾ ಕ್ಲಾಸಿಕ್‌ ಸ್ಪರ್ಧೆ ನೋಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನೀರಜ್‌ ಚೋಪ್ರಾ, ಹಾಯ್‌ ರಂಜಿತ್‌, ಎನ್‌ಸಿ ಕ್ಲಾಸಿಕ್‌ಗೆ ಬರುವ ನಿಮ್ಮನ್ನು ಬೆಂಗಳೂರಿನಲ್ಲಿ ಸಂಪೂರ್ಣ ವಿವಿಐಪಿ ಸೌಲಭ್ಯಗಳು ಕಾಯುತ್ತಿದೆ. ಕ್ರೀಡಾಂಗಣದ ಸಮೀಪದಲ್ಲೇ ಇರುವ ಪ್ರಸಿದ್ಧ ಹೋಟೆಲ್‌ನಲ್ಲಿ ನೀವು ಉಳಿದುಕೊಳ್ಳಲಿದ್ದೀರಿ ಎಂದು ಭರವಸೆಯನ್ನು ನೀಡಿದ್ದಾರೆ.

ಸೆಪ್ಟೆಂಬರ್ 2024 ರಲ್ಲಿ ನೀರಜ್ ಅವರು ತಮ್ಮ ಅಗ್ರಸ್ಥಾನ ಕಳೆದುಕೊಂಡಿದ್ದರು. 2025 ರಲ್ಲಿ ನೀರಜ್‌ ಇದುವರೆಗಿನ ಎಲ್ಲಾ ಸ್ಪರ್ಧೆಗಳಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನೀರಜ್ ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಪೋಚ್ ಇನ್ವಿಟೇಶನಲ್‌ನಲ್ಲಿ ಗೆಲುವಿನೊಂದಿಗೆ ಅಭಿಯಾನ ಪ್ರಾರಂಭಿಸಿದರು. ಇದಾದ ಬಳಿಕ ಮೇ ತಿಂಗಳಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆದರು. ಅಲ್ಲಿ ಅವರು 90.23 ಮೀಟರ್ ದೂರ ಕ್ರಮಿಸಿ ಹೊಸ ರಾಷ್ಟ್ರೀಯ ದಾಖಲೆಯನ್ನು ದಾಖಲಿಸಿದರು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net