ಚಿತ್ರ ವಿ-ಚಿತ್ರ: ಏಣಿಯಲ್ಲಿ ಬಾವಿಯಿಂದ ಮೇಲೇರಿದ ಕರಡಿ

sudina 2
Published on

ನವದೆಹಲಿ: ಸಾಮಾನ್ಯವಾಗಿ ಹಳ್ಳಿಗಳಲ್ಲಿ ದನಕರುಗಳು, ಆಗಾಗ ಕಾಡುಪ್ರಾಣಿಗಳೆಲ್ಲ ಬಾವಿಯಲ್ಲಿ ಬೀಳುವುದು ಸಾಮಾನ್ಯ. ಆದರೆ ಕರಡಿ ಬಿದ್ದ ಘಟನೆ ಬಹಳ ಅಪರೂಪ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿನ ತೆರೆದ ಬಾವಿಯಲ್ಲಿ ಬಿದ್ದಿದ್ದ ಎರಡು ಕರಡಿಗಳನ್ನು ನಾಲ್ಕು ತಾಸುಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ರಕ್ಷಿಸಲಾಗಿದೆ.

ಅರಣ್ಯ ಇಲಾಖೆಯವರು ಈ ಕರಡಿಗಳನ್ನು ರಕ್ಷಿಸಲು ಏಣಿಯನ್ನು ಬಳಸಿದ್ದರು. ‘ಕಾರ್ಯಾಚರಣೆ ಸಂದರ್ಭದಲ್ಲಿ ಸುತ್ತ ನೆರೆದಿದ್ದ ಜನಸಮೂಹ ಕೂಡ ಸ್ವಲ್ಪ ಅಡೆತಡೆಗಳನ್ನು ಸೃಷ್ಟಿಸುತ್ತಿತ್ತು. ರಕ್ಷಿಸಿದ ಬಳಿಕ ಎರಡೂ ಕರಡಿಗಳನ್ನು ಕಾಡಿನಲ್ಲಿ ಬಿಡಲಾಯಿತು’ ಎಂದು ವಿವರಿಸುತ್ತಾರೆ

ಅರಣ್ಯ ಇಲಾಖೆ ಅಧಿಕಾರಿಗಳು. ಕಾರ್ಯಾಚರಣೆಯ ವಿಡಿಯೋ ಕರಡಿ ಏಣಿಯ ಮೂಲಕ ಬಾವಿಯಿಂದ ಮೇಲೇರುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗಿದ್ದು, ಅರಣ್ಯ ಇಲಾಖೆಯವರ ಪರಿಶ್ರಮವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net