VIDEO: ಹುಚ್ಚೆದ್ದು ಕುಣಿದ ಕರಡಿ ಮರಿಯ ಡ್ಯಾನ್ಸ್​​ ವೈರಲ್​!

Bearcubs
Published on

ಕೆನಡಾ: ಕರಡಿ ಮರಿಯ ಡ್ಯಾನ್ಸ್​ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಫುಲ್​​ ಎಂಜಾಯ್​ ಮಾಡುತ್ತಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಭಾರೀ ಮೆಚ್ಚುಗೆ ಪಡೆದಿರುವ ಈ ವಿಡಿಯೋವನ್ನು ಈವರೆಗೆ 2.5 ಮಿಲಿಯನ್​ ಜನರು ವೀಕ್ಷಿಸಿದ್ದಾರೆ. ಕರಡಿ ಮರಿಯ ಈ ಡ್ಯಾನ್ಸ್​​ ಬಹುಶಃ ಹಿಂದೆಂದೂ ನೋಡಿರಲೂ ಸಾಧ್ಯವಿಲ್ಲ ಎಂದು ಟ್ವಿಟಿಗರು ಹಾಡಿಹೊಗಳಿದ್ದಾರೆ.

ತನ್ನ ಎರಡು ಕಾಲುಗಳಿಂದ ಮೇಲಿನಿಂದ ಕೆಳಗೆ ಜಿಗಿದು,ಕುಣಿದಿರುವ ಈ ಪುಟ್ಟ ಮರಿಯ ಡ್ಯಾನ್ಸ್​ ನಿಜಕ್ಕೂ ಅಚ್ಚರಿಯಾಗುತ್ತದೆ. ಓ ದೇವರೇ.. ಇದರ ನೃತ್ಯ ಎಷ್ಟು ಚೆನ್ನಾಗಿದೆ ಎಂದು ಟ್ವಿಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆನಡಾದ ವ್ಯಕ್ತಿಯೊಬ್ಬರು ಕರಡಿ ಮರಿ ಕುಣಿಯುತ್ತಿರುವ ಈ ವಿಡಿಯೋವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದು, ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net