ಟಬ್​ನಲ್ಲಿ ಕರಡಿ ಮರಿಯ ನೀರಾಟ

sudina 2
Published on

ನವದೆಹಲಿ: ಸಾಮಾನ್ಯವಾಗಿ ನೀರಿನಲ್ಲಿ ಆಡುವುದೆಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಬೇಸಿಗೆ ಬಂತೆಂದರೆ ಎಲ್ಲರೂ ನೀರಿನಲ್ಲಿ ಆಡುವವರೇ. ಇದಕ್ಕೆ ಪ್ರಾಣಿಗಳೂ ಹೊರತಲ್ಲ. ಅವುಗಳಿಗೂ ನೀರಿನಲ್ಲಿ ಆಡುವುದೆಂದರೆ ಬಹಳ ಇಷ್ಟ. ಒರೆಗಾನ್ ಮೃಗಾಲಯದಲ್ಲಿನ ಕರಡಿ ಮರಿಯೊಂದು ನೀರಿನ ಟಬ್​ನಲ್ಲಿ ಕುಳಿತು ಮಕ್ಕಳಂತೆ ಖುಷಿಯಿಂದ ಆಟವಾಡುತ್ತಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಒರೆಗಾನ್ ಮೃಗಾಲಯದ ಅಧಿಕೃತ

ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಟಕೋಡಾ ಎಂಬ ಹೆಸರಿನ ಈ ಕರಡಿಮರಿಯು ಕೈಕಾಲು ಬಡಿಯುತ್ತ ಖುಷಿ ಅನುಭವಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರಕ್ಷಿತ ಪ್ರಾಣಿಗಳಲ್ಲಿ ಒಂದಾಗಿರುವ ಟಕೋಡಾದ ಪಾಲಕರು ಇದರೊಂದಿಗಿಲ್ಲ. ನೀರಾಟದ ಖುಷಿಯನ್ನು ಆನಂದಿಸುತ್ತಿರುವ ಇದರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net