ಮಂಗಳೂರಿನ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್, ಪರಿಸರ ಅಧಿಕಾರಿ ಡಾ. ಮಂಜು ಆರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಸತೀಶ್ ಸದಾನಂದ್ ನೇತೃತ್ವದ ಸುರತ್ಕಲ್‌ನ ನಾಗರಿಕ ಸಲಾಹಾ ಸಮಿತಿಯ ಸದಸ್ಯರು, ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಎಂಆರ್‌ಪಿಎಲ್ ಅಧಿಕಾರಿಗಳು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಎಂಆರ್‌ಪಿಎಲ್‌ನ ಹೆಚ್.ಎಸ್. ರಾಜೀವ್, ಕೃಷ್ಣ ಪಿಳ್ಳೈ ಅನಿಲ್ ಕುಮಾರ್, ಪ್ರಸನ್ನ ಕುಮಾರ್ ಟಿ ಮತ್ತು ರಾಜೇಂದ್ರ ಆಚಾರ್ಯ ಉಪಸ್ಥಿತರಿದ್ದರು.