ಕಾಲೇಜು ಶಿಕ್ಷಣದಲ್ಲಿ ಸ್ಫೂರ್ತಿಯಿರಲಿ

ಬನ್ನೂರು ಮೈಸೂರು ಮುಖ್ಯ ರಸ್ತೆಯಲ್ಲಿರುವ ಎಟಿಎಂಇ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಆತ್ಮೀಯ 2024ರ ಕಾರ್ಯಕ್ರಮದಲ್ಲಿ ಚಿತ್ರನಟ ಪ್ರೇಮ್ ಅವರನ್ನು ಸನ್ಮಾನಿಸಲಾಯಿತು. ಮಹೇಂದ್ರಸಿಂಗ್ ಕಾಳಪ್ಪ, ಆರ್.ಗುರು, ಡಾ.ಸುರೇಶ್ ಶೆಟ್ಟಿ, ಡಾ.ಲಕ್ಷ್ಮೀನಾರಾಯಣ್ ಶೆಣೈ, ಎಲ್. ಅರುಣ್‌ಕುಮಾರ್, ಕೆ.ಶಿವಶಂಕರ್, ವಿರೇಶ್, ಎಲ್. ಬಸವರಾಜು ಇತರರಿದ್ದರು.

Published on

ಬನ್ನೂರು: ಬಹುತೇಕ ಚಿತ್ರರಂಗಕ್ಕೆ ಕಾಲಿಡುತ್ತಿರುವ ಹೆಚ್ಚಿನ ನಟರೆಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಆಗಿರುವುದು ಸಂತಸವನ್ನುಂಟು ಮಾಡುತ್ತಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಚಿತ್ರನಟ ನೆನಪಿರಲಿ ಪ್ರೇಮ್ ತಿಳಿಸಿದರು.

ಪಟ್ಟಣದ ಮೈಸೂರು ಮುಖ್ಯರಸ್ತೆಯಲ್ಲಿರುವ ಎಟಿಎಂಇ ಕಾಲೇಜಿನ ಆವರಣದಲ್ಲಿ ಎರಡು ದಿನದ ಕಲ್ಚರಲ್ ಫೆಸ್ಟ್ ಆತ್ಮೀಯ 2024ರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜು ಶಿಕ್ಷಣವೆಂದರೆ ಯುವಜನರಿಗೆ ಸ್ಫೂರ್ತಿದಾಯಕವಾಗಿರಬೇಕು. ಪಠ್ಯದ ಜತೆಗೆ ಸಾಂಸ್ಕೃತಿಕ, ಜನಪದ ಕಲೆ, ರಂಗಭೂಮಿತ್ತ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬನ್ನೂರಿನ ಸಮಾಜ ಸೇವಕ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿದರು. ಸೈಕಲ್‌ಪ್ಯೂರ್ ಅಗರಬತ್ತಿ ಅಧ್ಯಕ್ಷ ಆರ್. ಗುರು, ಕೃಷ್ಣ ಗ್ರೂಪ್ ಆಸ್ಪತ್ರೆ ಡಾ. ಸುರೇಶ್ ಶೆಟ್ಟಿ, ಆಯುರ್ವೇದ ಸಂಶೋಧನಾಲಯದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮಿನಾರಾಯಣ್‌ಶೆಣೈ, ಎಟಿಎಂಇ ಕಾಲೇಜಿನ ಅಧ್ಯಕ್ಷ ಎಲ್.ಅರುಣ್‌ಕುಮಾರ್, ಕಾರ್ಯದರ್ಶಿ ಕೆ. ಶಿವಶಂಕರ್, ಖಜಾಂಚಿ ಆರ್. ವಿರೇಶ್, ಪ್ರಾಂಶುಪಾ ಎಲ್. ಬಸವರಾಜು, ಉಪನ್ಯಾಸಕ ರೋಹಿತ್, ಶಾರದಾ ದೇವಿ, ಜ್ಯೋತಿ ಪ್ರೇಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net