

ಮುಂಬೈ: ಮುಂಬೈನ 78 ವರ್ಷದ ಮಹಿಳೆಗೆ ಸೈಬರ್ ಕ್ರೈಮ್ ವಂಚಕರು ಬರೊಬ್ಬರಿ 1.5 ಕೋಟಿ ರೂ. ವಂಚಿಸಿದ್ದಾರೆ ಎಂದು ಗುರುವಾರ ವರದಿಯಾಗಿದೆ.
ಹಿರಿಯ ಉದ್ಯಮಿ, ಬಿಲ್ಡರ್ ಆಗಿರುವ ವೃದ್ಧೆಗೆ ಕರೆ ಮಾಡಿ ವಂಚಕರು ತನಿಖಾಧಿಕಾರಿಗಳಂತೆ ನಟಿಸಿ ಸೈಬರ್ ಅರೆಸ್ಟ್ ಮಾಡಿದ್ದಾರೆ. ಬಳಿಕ ಬೆದರಿಸಿ 1.5 ಕೋಟಿ ರೂ. ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ..
ಕೆಲ ವಾರಗಳಿಂದೆ ತಮ್ಮ ಮಗಳಿಗೆ ಫುಡ್ ಕೊರಿಯರ್ ಮಾಡಿದ್ದಾಳೆ. ಮರುದಿನ ಆಕೆಗೆ ಕೊರಿಯರ್ ಕಂಪನಿಯಿಂದ ಅನಾಮಿಕ ವ್ಯಕ್ತಿಯಿಂದ ಕರೆ ಬಂದಿದೆ. ಆಕೆಯ ಕೊರಿಯರ್ ಪ್ಯಾಕೇಜಿನಲ್ಲಿ ಆಹಾರದ ಜತೆ ಆಧಾರ್ ಕಾರ್ಡ್, ಅವಧಿ ಮೀರಿದ ಪಾಸ್ಪೋರ್ಟ್ಗಳು, ಕ್ರೆಡಿಟ್ ಕಾರ್ಡ್ಗಳು ಮತ್ತು ಕಾನೂನುಬಾಹಿರ ಪದಾರ್ಥಗಳು ಮತ್ತು 2,000 ಯುಎಸ್ ಡಾಲರ್ ನಗದು ಇದೆ ಆರೋಪಿಸಿದ್ದಾರೆ.
ಇದನ್ನೂ ಓದಿ: ರೋಟರಿಯಿಂದ ಸಮಾಜಮುಖಿ ಕಾರ್ಯಕ್ರಮ ನೀಡಿದೆ: ವಿಕ್ರಂದತ್ತ
ಬಳಿಕ ಸೈಬರ್ ಕ್ರೈಂ ಬ್ರಾಂಚ್ ಮತ್ತು ಹಣಕಾಸು ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಂತೆ ನಟಿಸುವ ವಂಚಕರು ನಂತರದ ದಿನಗಳಲ್ಲಿ ವೃದ್ಧೆಗೆ ಫೋನ್ ಮತ್ತು ವಿಡಿಯೋ ಕರೆಗಳನ್ನು ಸಹ ನಡೆಸಿ ತನಿಖೆ ಸಹಕರಿಸುವಂತೆ ಬೆದರಿಕೆ ಹಾಕಿದ್ದಾರೆ.
ಅಲ್ಲದೆ, ಇದು ಗಂಭೀರ ಪ್ರಕರಣ ಇದರಲ್ಲಿ ನಿನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಖದೀಮರು, ವಿಡಿಯೋ ಕಾಲ್ನಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸಿದ್ದಾರೆ. ಬಳಿಕ ಈ ಪ್ರಕರಣದಿಂದ ಹೊರ ಬರಲು ನಾವು ಹೇಳಿದಷ್ಟು ಹಣ ಕೊಟ್ಟು ಬಿಡಿ ಎಂದಿದ್ದಾರೆ. ಇದಕ್ಕೆ ಹೆದರಿದ ವೃದ್ಧೆ ವಂಚಕರು ಹೇಳಿದ ಖಾತೆಗೆ 1.5 ಕೋಟಿ ರೂ. ಹಣ ವರ್ಗಾವಣೆ ಮಾಡಿ ಮೊಸ ಹೋಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)