ಸಮುದಾಯದವರು ವಿದ್ಯಾವಂತರಾಗಿರಿ

ಸಮುದಾಯದವರು ವಿದ್ಯಾವಂತರಾಗಿರಿ
Published on

ಸರಗೂರು: ನಾಮಧಾರಿಗೌಡ ಸಮಾಜದ ಯುವಕರು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಸದೃಢರಾಗಲು ಎಲ್ಲರೂ ವಿದ್ಯಾವಂತರಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ವೇಣುಗೋಪಾಲ್ ಹೇಳಿದರು.

ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೋಟೆ, ಸರಗೂರು ತಾಲೂಕು ನಾಮಧಾರಿಗೌಡ ಯುವಕ ಸಂಘದ 14ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ನಾಮಧಾರಿಗೌಡ ಸಮಾಜ ಅಲ್ಪಸಂಖ್ಯಾತ ಸಮಾಜವಾಗಿದ್ದು, ಬೆರಳೆಣಿಕೆ ಜನರು ಮಾತ್ರ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜ ಏಳಿಗೆ ಗಳಿಸಿ, ಮುಖ್ಯವಾಹಿನಿಗೆ ಬರಲು ಎಲ್ಲರೂ ಶೈಕ್ಷಣಿಕವಾಗಿ ಮುಂದುವರಿಯಬೇಕು. ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ಅಖಿಲ ನಾಮಧಾರಿಗೌಡ ಸಂಘದ ಅಧ್ಯಕ್ಷ ಭೀಮರಾಜ್ ಮಾತನಾಡಿ, ಸಮಾಜದ ಬಂಧುಗಳು ಒಗ್ಗೂಡಿ ಮುನ್ನುಗ್ಗಬೇಕು. ಸಂಘಟಿತರಾದರೆ ಮಾತ್ರ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸುವ ಮೂಲಕ ಪಾಲಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಯುವಕರ ಸಂಘದ ಅಧ್ಯಕ್ಷ ಭರತ್ ಚಾಮರಾಜು ಮಾತನಾಡಿ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲರೂ ವಿದ್ಯಾವಂತರಾಗಬೇಕು. ಸಮಾಜದ ವಿವಿಧ ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಯುವಕರು ಪಾಲ್ಗೊಳ್ಳಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಯುವಕ ಸಂಘದ ಅಧ್ಯಕ್ಷ ಭರತ್ ಚಾಮರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಮ್ಮ ಯುವಕರ ಸಂಘಗಳು ಬೆಳೆಯುವುದು ಕಷ್ಟ. ಸಹಕಾರ ಸಂಘಗಳ ಪ್ರತಿನಿಧಿಗಳು ವೃತ್ತಿಪರತೆ, ಶಿಸ್ತು ಹಾಗೂ ಬದ್ಧತೆ ಮೈಗೂಡಿಸಿಕೊಳ್ಳಬೇಕು ಎಂದರು.

ಅಖಿಲ ನಾಮಧಾರಿಗೌಡ ಸಂಘದ ಅಧ್ಯಕ್ಷ ಭೀಮರಾಜ್, ಸಂಘದ ಪದಾಧಿಕಾರಿಗಳಾದ ಅಮಿತ್‌ಕುಮಾರ್, ಜಯಶಂಕರ್, ಜಿ.ವೇಣುಗೋಪಾಲ್, ಪರಶಿವಮೂರ್ತಿ, ನಾಗೇಂದ್ರ, ಆನಂದ್, ಮಾರುತಿ, ಸತೀಶ್, ಚರಣ್, ಎನ್.ಜೆ.ಪದ್ಮರಾಜ್, ನಾಗೇಶ್, ಸತ್ಯನಾರಾಯಣ, ಪ್ರಶಾಂತ್, ಮಹೇಶ್, ಪ್ರಕಾಶ್, ಸುಬ್ರಹ್ಮಣ್ಯ, ಚೇತನ್, ಪುನೀತ್, ಮಧು, ಪಾರ್ಶ್ವನಾಥ್, ಅಭಿಲಾಶ್, ಪುನೀತ್ ಕುಮಾರ್, ವೇಣುಗೋಪಾಲ್, ಭರತ್, ಸಿ.ಪಿ.ನಾಗರಾಜು, ಶ್ರೀನಿವಾಸ್, ತುಂಬಸೋಗೆ ವೇಣುಗೋಪಾಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net