

ದಾವಣಗೆರೆ: ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್, ಆಪರೇಷನ್ ಕಮಲ ಮಾಡುವಂತ ಮುರ್ಖರು ಯಾರು ಇಲ್ಲ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿದ ಬಿ.ಸಿ. ಪಾಟೀಲ್, "ಆಪರೇಷನ್ ಕಮಲ ಮಾಡುವಂತ ಮುರ್ಖರು ಯಾರು ಇಲ್ಲ. ಕಾಂಗ್ರೆಸ್ನಲ್ಲಿ ಅವರ ಬುಡ ಅವರೆ ಅಲುಗಾಡಿಸುತ್ತಿದ್ದಾರೆ" ಎಂದರು.
ಹುಲಿ ಉಗುರು ವಿಚಾರವಾಗಿ ಕಿಡಿಕಾರಿದ ಅವರು, "ಇಷ್ಟು ವರ್ಷ ಅರಣ್ಯ ಇಲಾಖೆಯವರು, ಸರ್ಕಾರ ನಿದ್ದೆ ಮಾಡ್ತಾಯಿದ್ರಾ? ಕಾಂಗ್ರೆಸ್ ಸರ್ಕಾರವನ್ನು ಜನ ಒದ್ದು ಒಡಿಸುವುದಕ್ಕೆ ನಾವು ಕಾಯುತ್ತಿದ್ದೇವೆ" ಎಂದು ಹೇಳಿದರು.
ಹಾವೇರಿಯಿಂದ ಲೋಕಸಭೆಗೆ ಸ್ಪರ್ಧಿಸ್ತಾರಾ ಬಿ.ಸಿ. ಪಾಟೀಲ್? ಎಂಬ ಪ್ರಶ್ನೆಗೆ, ಲೋಕಸಭೆ ಚುನಾವಣೆಗೆ ಹಾವೇರಿ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಹೇಳಿದರು.