More

    ನಗರಸಭೆ ಸಾಮಾನ್ಯ ಸಭೆ! ಆಸ್ತಿ ಕಬಳಿಕೆ ಕುರಿತು ಗಂಭೀರ ಚರ್ಚೆ ! ಕಾಂಗ್ರೆಸ್​ ಸದಸ್ಯರ ಅಸಂವಿಧಾನಿಕ ಪದ ಬಳಕೆಗೆ ಖಂಡನೆ

    ವಿಜಯವಾಣಿ ಸುದ್ದಿಜಾಲ ಗದಗ
    ನಗರಸಭೆ ಆಸ್ತಿ ಕಬಳಿಕೆ, ಪ್ರಭಾವಿ ಸದಸ್ಯರ ವಾರ್ಡ್​ಗಳಿಗೆ ಮಾತ್ರ ಅಭಿವೃದ್ಧಿ ಕಾಮಗಾರಿಗಳ ಹಂಚಿಕೆ, ನಗರೋತ್ಥಾನ ಅನುದಾನ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಸಭೆಗೆ ಮಂಜೂರು ಮಾಡಿದ್ದ 40 ಕೋಟಿ ಅನುದಾನ ಸೇರಿದಂತೆ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಹಲವು ಚರ್ಚೆಗಳು ಜರುಗಿದ್ದಲ್ಲದೇ, ವಾರ್ಡ್​ವಾರು ಅಭಿವೃದ್ಧಿ ಕಾಮಗಾರಿಗಳ ಹಂಚಿಕೆ ತಾರತಮ್ಯ ಮತ್ತು ಕಾಂಗ್ರೆಸ್​ ಸದಸ್ಯರ ಅಸಂವಿಧಾನಿಕ ಪದಬಳಕೆಯಿಂದ ಸಾಮಾನ್ಯ ಸಭೆಯನ್ನು ಗದ್ದಲ ಗಲಾಟೆಗೆ ನೂಕಿತು.
    ಸಭೆ ಆರಂಭ ಆಗುತ್ತಿದ್ದಂತೆ ನಗರಸಭೆ ಆಸ್ತಿಗಳನ್ನು ಗುತ್ತಿಗೆ ನೀಡುವ ವಿಚಾರ ವನ್ನು ಪ್ರತಿಪಕ್ಷ ಸದಸ್ಯರು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡರು. ಸಭೆಯ ನಡಾವಳಿಯಲ್ಲಿ ಈ ಹಿಂದಿನ ಸಭೆಯ ನಡಾವಳಿಗಳಿಗೆ ಅನುಮತಿ ಕೋರಿ ಅಜೆಂಡಾ ಪ್ರಸ್ತಾಪವಾದಾಗ, ಈ ಹಿಂದಿನ ಸಭೆಯ ನಡಾವಳಿ ಓದಿ ಹೇಳುವಂತೆ ಕೃಷ್ಣ ಪರಾಪುರೆ ಆಗ್ರಹಿಸಿದರು. ನಗರಸಭೆ ವ್ಯವಸ್ಥಾಪಕರು ವಿಷಯ ಓದುತ್ತಿದ್ದಂತೆ ಸಮಯ ವಿಳಂಬ ಆಗುವ ಬಗ್ಗೆ ಕಲ ಸದಸ್ಯರು ತಕರಾರು ತೆಗೆದರು. ಈ ವೇಳೆ ಪ್ರತಿಪಕ್ಷ ನಾಯಕ ಎಲ್​.ಡಿ. ಚಂದಾವರಿ “ನಗರಸಭೆ ಆಸ್ತಿಯನ್ನು ಲೀಸ್​ ನೀಡುವ ನಡಾಳಿವಳಗಳ ಕರಿತು ಈ ಸಭೆ ತಿಳಿದುಕೊಳ್ಳುವ ಅಗತ್ಯವಿದೆ?. ಯಾವುದೇ ಸಾರ್ವಜನಿಕ ಆಸ್ತಿಯನ್ನು 5 ವರ್ಷ ಲೀಸ್​ ನೀಡುವ ಕಾನೂನು ರದ್ದಾಗಿದೆ. 30 ವರ್ಷಕ್ಕೆ ಲೀಸ್​ ಕಮ್​ ಸೇಲ್​ ನೀಡುವ ನಿಯಮ ಜಾರಿ ಇದೆ. ಈ ಹಿಂದಿನ ನಡಾವಳಿಗಳಲ್ಲಿ ವೈಯಕ್ತಿಕ ಲಾಭ ಆಗುವ ಅಂಶಗಳನ್ನು ಬರೆದು ಅಜೆಂಡಾ ಪಾಸ್​ ಮಾಡಿಕೊಂಡ ಉದಾಹರಣೆಗಳಿವೆ. ಈ ಹಿಂದಿನ ಸಭೆಯ 206 ಸಂಖ್ಯೆಯ ಠರಾವು ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅಗತ್ಯವಿದೆ. ಹೀಗಾಗಿ ಎಲ್ಲ ನಡಾವಳಿ ಬಗ್ಗೆ ಓದಿ ಹೇಳುವ ಅಗತ್ಯವಿದೆ ಎಂದರು.
    ಕಾಂಗ್ರೆಸ್​ ಸದಸ್ಯ ಕೃಷ್ಣ ಪರಾಪುರೆ ಮದ್ಯಪ್ರವೇಶಿಸಿ, ವಾರ್ಡ ನಂಬರ್​ 30 ರಲ್ಲಿ ನಗರಸಭೆ ಜಾಗೆಯಲ್ಲಿ ತೋಟಗಂಟಿಮಠ ಸಂಕೀರ್ಣ ಕಟ್ಟಲಾಗುತ್ತಿದೆ. ಈ ಪ್ರಕ್ರಿಯೆ ಹಿಂದೆ 18 ಲಕ್ಷ ರೂ. ಲಂಚ ವ್ಯವಹಾರ ನಡೆಯಲಾಗಿದೆ ಎಂದು ತಿಳಿದು ಬಂದಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿ ಗಲಾಟೆ ಶುರುವಾಯಿತು. ವಿಕೋಪಕ್ಕೆ ತಿರುಗಿದ ಸಭೆಯಲ್ಲಿ “ನೀವೇ ಹಣ ಲಪಟಾಯಿಸಿದ್ದಿರಿ’ ಎಂದು ಕೃಷ್ಣ ಪರಾಪುರೆ ನಗರಸಭೆ ಆಯುಕ್ತರು, ಅಧ್ಯಕ್ಷರ ಕಡೆ ಬೊಟ್ಟು ಮಾಡಿ ಆರೋಪಿಸಿದರು. ಲಂಚ ವ್ಯವಹಾರ ನಡೆದ ಬಗ್ಗೆ ಸಾ ಇದ್ದರಷ್ಟೇ ಆರೋಪಿಸಿ ಎಂದು ಅಧ್ಯೆ ಉಷಾ ದಾಸರ ಕಿಡಿ ಕಾರಿದರು. ಈ ನಡುವೆ ರಾವೇಂದ್ರ ಯಳವತ್ತಿ ಮಧ್ಯಪ್ರವೇಶ ಮಾಡಿ, ಈ ವಿಷಯ ಈ ಹಿಂದಿನ ಯಾವುದೇ ಸಾಮಾನ್ಯ ಸಭೆಯಲ್ಲಿ ಚರ್ಚೆ ಆಗಿಲ್ಲ. ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್​ ಸದಸ್ಯರ ಗಲಾಟೆ ಮುಂದುವರಿದ ಸಂದರ್ಭದಲ್ಲಿ “ಈ ಹಿಂದೆ ನಗರಸಭೆಯಿಂದ ಖಾಸಗಿ ವ್ಯಕ್ತಿಗಳಿಗೆ ನಿಯಮ ಬಾಹಿರವಾಗಿ ಲೀಸ್​ ನೀಡಿದ ಆಸ್ತಿಗಳನ್ನೆಲ್ಲ ಮರಳಿ ನಗರಸಭೆಗೆ ಪಡೆಯೋಣ ಎಂದು ಹೇಳಿ ವಾತಾವರಣವನ್ನು ಶಾಂತಗೊಳಿಸಿದರು.
    ಬೊಮ್ಮಾಯಿ ನೀಡಿದ್ದ ಅನುದಾನ ಎನಾಯಿತು?

    ಕಳೆದ ಜು.21 ರಂದು 45 ಕಾಮಗಾರಿಗಳ 3.37 ಕೋಟಿಗೆ ಕರೆದ ಟೆಂಡರ್​ ಅನುಮೋದನೆ ಕುರಿತು ಚರ್ಚೆ ಜರುಗಿ, 45 ಕಾಮಗಾರಿಗಳ ವಿವರ ನೀಡುವಂತೆ ವಿಪಕ್ಷ ಸದಸ್ಯರು ಆಗ್ರಹಿಸಿದರು. ಈ ನಡುವೆ ಆಡಳಿತ ಸದಸ್ಯರು ಎದ್ದು ನಿಂತು, ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಗರಸಭೆಗೆ 40 ಕೋಟಿ ಅನುದಾನ ಮಂಜೂರು ಮಾಡಿದ್ದರು. ಈಗ ಎಚ್​.ಕೆ. ಪಾಟೀಲರೇ ಸಚಿವರಾಗಿದ್ದಾರೆ. ಈ ಅನುದಾನ ತಂದು ಅಭಿವೃದ್ಧಿಗೆ ಬಳಸಿದ್ದಾರೆ ಎಂಬುದನ್ನು ಸಭೆಗೆ ತಿಳಿಸಿ ಎಂದು ವಿಪಕ್ಷ ಸದಸ್ಯರಿಗೆ ಪ್ರಶ್ನಿಸಿದರು.

    ಪ್ರತಿಜ್ಞೆ ನಗೆಪಾಟಲಿಗೆ
    ಸಭೆ ಆರಂಭಕ್ಕೂ ಮುನ್ನ ನಡೆದ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞೆ ನಗೆಪಾಟಲಿಗೆ ಈಡಾಯಿತು. ಪ್ರತಿಜ್ಞೆ ಮಾಡುವ ಕುರಿತು ಸರ್ಕಾರ ಆದೇಶ ಪಾಲನೆ ಸಂದರ್ಭದಲ್ಲಿ “ನಗರಸಭೆಯಲ್ಲಿ’ ಈ ಪ್ರತಿಜ್ಞೆ ಊಜಿರ್ತವೇ ಎಂದು ವಿಪಕ್ಷ ನಾಯಕ ಚಂದಾವರಿ ಕೇಳಿದರು. ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿರುವಾಗ ಇದು ಅಸಮಂಜಸ ಎಂದು ಆರೋಪಿಸಿದರು. ಇದಕ್ಕೆ ಕೆಂಡಾಮಂಡಲರಾದ ಅಧ್ಯಕ್ಷೆ ಉಷಾ ದಾಸರ, ಈ ಹಿಂದಿನ ಅಧಿಕಾರದಲ್ಲಿ ಭ್ರಷ್ಟಾಚಾರ ಅಧಿಕವಾಗಿತ್ತು. ಗದಗ ನಗರದಲ್ಲೆ ಕಾಂಗ್ರೆಸ್​ ಭ್ರಷ್ಟಾಚಾರ ಕುರಿತು ಮಾತನಾಡುತ್ತಿದ್ದಾರೆ. ಸರ್ಕಾರದ ಆದೇಶ ಪಾಲಿಸಲೇ ಬೇಕು ಎಂದು ಸೂಚಿಸಿದರು. ಭ್ರಷ್ಟಾಚಾರ ವಿರೋಧಿ ಪ್ರತಿಜ್ಞೆ ವೇಳೆ ಸದಸ್ಯರ ಮೊದಲ್ಲಿ ಮುಗುಳ್ನಗೆ ಕಾಣುತ್ತಿತ್ತು. ಪ್ರತಿಜ್ಞೆ ನಗೆಪಾಟಲಿಗೆ ಈಡಾಯಿತು.

    ಅಸಂವಿಧಾನಿಕ ಪದ ಬಳಕೆ:
    ಕೆಲ ಕಾಂಗ್ರೆಸ್​ ಸದಸ್ಯರ ವಾರ್ಡ್​ಗಳಿಗೆ ಅತ್ಯಧಿಕ ಕಾಮಗಾರಿ ಮತ್ತು ಅನುದಾನ ಹಂಚಿಕೆ ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ಸಿನ ಮಹಿಳಾ ಸದಸ್ಯರಾದ ಪದ್ಮಾ ಕಟಗಿ, ಲಲಿತಾ ಅಸೂಟಿ ಸೇರಿದಂತೆ ಹಲವರು ವೇದಿಕೆ ಏರಿ ಪ್ರತಿಭಟನೆ ಮಾಡಿದರು. ಮಹಿಳಾ ಸದಸ್ಯರಿಗೆ ಸದಸ್ಯ ಕೃಷ್ಣ ಪರಾಪುರೆ ಬೆಂಬಲ ನೀಡಿದರು. ವೇದಿಕೆ ಮೇಲೆ ದಾಖಲೆಗಳನ್ನು ಹರಿದು ಬಿಸಾಕಿದರು. ಈ ವೇಳೆ ಅಧ್ಯಕ್ಷರ ಜತೆ ಮಾತಿನ ಚಕಮಕಿ ನಡೆಯಿತು. ತಾಳ್ಮೆ ಕಳೆದುಕೊಂಡ ಪರಾಪುರೆ ಅಸಂವಿಧಾನಿಕ ಪದ ಬಳಕೆ ಮಾಡಿದರು. ಮಾತಿಗೆ ಮಾತು ಬೆಳೆದು ಪ್ರತಿಭಟನೆ ಅತೀರೇಕವಾಯಿತು. ಈ ವೇಳೆ ಸಿಟ್ಟಾದ ಉಷಾ ದಾಸರ “ದಲಿತ ಮಹಿಳೆ ಅಧ್ಯಕ್ಷರಾಗಿದ್ದನ್ನು ಸಹಿಸಿಕೊಳ್ಳಲು ನಿಮಗೆ ಆಗುತ್ತಿಲ್ಲ’ ಎಂದು ವಾಗ್ಬಾಣ ಬಿಟ್ಟರು. ಕಾಂಗ್ರೆಸ್​, ಬಿಜೆಪಿ ಸದಸ್ಯರು ಮಧ್ಯ ಪ್ರವೇಶಿಸಿ ಪ್ರತಿಭಟನೆ ಶಾಂತಗೊಳಿಸದರು.
    ಸಭೆಯಲ್ಲಿ ಉಷಾ ದಾಸರ, ಸುನಂದಾ ಬಾಕಳೆ, ಅನಿಲ ಅಬ್ಬಿಗೇರಿ, ರಾವೇಂದ್ರ ಯಳವತ್ತಿ, ಎಲ್​.ಡಿ. ಚಂದಾವರಿ ಸೇರಿದಂತೆ ಹಲವು ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts