More

    ಕಾಂಗ್ರೆಸ್​ ಸರ್ಕಾರದಿಂದ ಅನೇಕ ಯೋಜನೆಗಳು ಸ್ಥಗಿತ: ಅನಿಲ ಮೆಣಸಿನಕಾಯಿ

    ವಿಜಯವಾಣಿ ಸುದ್ದಿಜಾಲ ಗದಗ
    ರಾಜ್ಯ ಕಾಂಗ್ರೆಸ್​ ಸರ್ಕಾರ ರೈತರ ಕಿಸಾನ್​ ಸನ್ಮಾನ್​, ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ ಸ್ಥಗಿತ ಮಾಡಿದೆ. ಕಾಂಗ್ರೆಸ್​ ಸರ್ಕಾರ ರಾಜ್ಯ ಆಳುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
    ಗದಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ, ನಗರದ ಎಪಿಎಂಸಿ ಯಾರ್ಡ್​ ಗಳಲ್ಲಿ ಬಸವರಾಜ ಬೊಮ್ಮಾಯಿ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷ ಜನರಿಗೆ ಹೋಲ್​ ಸೇಲ್​ ಮೋಸ ಮಾಡಲು ನಿಂತಿದೆ. ಹೆಣ್ಣುಮಕ್ಕಳಿಗೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಗ್ಯಾರಂಟಿ ಕಾರ್ಡ ಕೊಡುತ್ತಿದ್ದಾರೆ. ಬಹುತಮ ಬರುವಷ್ಟು ಕ್ಷೇತ್ರಗಳಲ್ಲಿ ಸ್ಪಧಿರ್ಸದ ಕಾಂಗ್ರೆಸ್​ ಸುಳ್ಳು ಢೋಂಗಿ ಪ್ರಚಾರ ಮಾಡುವುದಕ್ಕೆ ಆರಂಭಿಸಿದೆ ಎಂದು ಆರೋಪಿಸಿದರು.
    ಋಣ ತೀರಿಸುವ ಸಮಯ:
    ನರೇಂದ್ರ ಮೋದಿಯವರು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ. ಅವರು ಸಾಮಾನ್ಯ ಬಡ ಕುಟುಂಬದಿಂದ ಬಂದವರು. ಅವರಿಗೆ ಬಡತನ ಅಂದರೆ ಏನು ಅಂತ ಗೊತ್ತಿದೆ. ಅವರು ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆ ತಂದಿದ್ದಾರೆ. ಭಯೋತ್ಪಾನೆಯನ್ನು ಸಂರ್ಪೂಣ ನಿರ್ಣಾಮ ಮಾಡಿದ್ದಾರೆ. ಕೊವಿಡ್​ ಸಂದರ್ಭದಲ್ಲಿ ದೇಶದ 130 ಕೋಟಿ ಜನರಿಗೆ ಉಚಿತ ಲಸಿಕೆ ಕೊಟ್ಟು ಪ್ರಾಣ ಉಳಿಸಿದ್ದಾರೆ. ಅಮೇರಿಕಾ ದೇಶದಲ್ಲಿ ಒಂದು ಲಸಿಗೆ 30 ಸಾವಿರ ರೂಪಾಯಿ ಇದೆ. ಆದರೆ, ಮೋದಿಯವರು ಎಲ್ಲರಿಗೂ ಉಚಿತವಾಗಿ ಮೂರು ಬಾರಿ ಲಸಿಕೆ ಕೊಟ್ಟಿದ್ದಾರೆ ಎಂದರು. ಈ ಭಾಗಕ್ಕೆ ಅನುಕೂಲವಾಗುವ ನೀರಾವರಿ ಯೋಜನೆ, ಕೈಗಾರಿಕೆಗಳನ್ನು ತರುವ ಪ್ರಯತವನ್ನು ಬಸವರಾಜ ಬೊಮ್ಮಾಯಿ ಮಾಡಲಿದ್ದಾರೆ. ಕ್ಷೇತ್ರದ ಜನರ ಧ್ವನಿಯಾಗಿ ಸಂಸತ್ತಿನಲ್ಲಿ ಸಿಂಹ ರ್ಜನೆ ಮಾಡಲಿದ್ದಾರೆ ಎಂದರು.
    ವಸಂತ ಪಡಗಡ, ಮುತ್ತಣ್ಣ ಗದಗಿನ, ಸಿದ್ದು ಪಲ್ಲೇದ, ಶರಣಪ್ಪ ಚಿಂಚಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts