ವಾಸನೆಯಲ್ಲೇ ಉಸಿರುಗಟ್ಟಿಸುವ ಚರಂಡಿ; ಸುರಕ್ಷತಾ ಸಾಧನವಿಲ್ಲದೇ ಕಾರ್ಮಿಕರನ್ನು ಇಳಿಸಿದ ಸ್ಥಳೀಯ ಆಡಳಿತ!

sewage
Published on

ಆನೇಕಲ್: ಚರಂಡಿ ಒಳಗೆ ಸಿಲುಕಿದ್ದ ಕಸವನ್ನು ಸ್ವಚ್ಛಗೊಳಿಸಲು ಆಧುನಿಕ ಸಾಧನಗಳು, ಸುರಕ್ಷಾ ಉಪಕರಣಗಳು ಬಂದಿದ್ದರೂ ಅದ್ಯಾವುದನ್ನೂ ನೀಡದೇ ಈ ಕಾರ್ಮಿಕರನ್ನು ನೇರವಾಗಿ ಬಿಬಿಎಂಪಿ ಚರಂಡಿಗೆ ಇಳಿಸಿದೆ ಎನ್ನಲಾಗಿದೆ.

ಚರಂಡಿ ಪಕ್ಕದಲ್ಲಿ ಸ್ವಚ್ಛತಾಕರ್ಮಿಗಳು
ಚರಂಡಿ ಪಕ್ಕದಲ್ಲಿ ಸ್ವಚ್ಛತಾಕರ್ಮಿಗಳು

ೆಉಸಿರುಗಟ್ಟುವ ಚರಂಡಿಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು ಹೆಣ್ಣು ಮಕ್ಕಳು ಕೈಯಿಂದಲೇ ಚರಂಡಿ ಒಳಗೆ ಹೋಗಿ ದುರ್ವಾಸನೆಯಲ್ಲಿ ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ಕೆಲಸ.

ಚರಂಡಿ
ಚರಂಡಿ ಯನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸುತ್ತಿರುವ ಮಹಿಳೆ

ಈ ಘಟನೆ ನಡೆದದ್ದು ಬೊಮ್ಮನಹಳ್ಳಿ ವ್ಯಾಪ್ತಿಯ ಹೊಂಗಸಂದ್ರದ ಮಸೀದಿ ರಸ್ತೆಯಲ್ಲಿ. ಸಾಕಷ್ಟು ಮಷಿನರಿಗಳು ಬಂದಿದ್ದರು ಕೈಯಲ್ಲೇ ಚರಂಡಿ ಕ್ಲೀನಿಂಗ್ ಮಾಡಲಾಗುತ್ತಿದ್ದು ಮಹಿಳೆಯರು ಯಾವುದೇ ಕೈಗವಸು, ಮುಖಕ್ಕೆ ಮಾಸ್ಕ್ ಇಲ್ಲದೆ ಚರಂಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net