ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಬಿಎಂಟಿಸಿ ಕಂಡಕ್ಟರ್​ಗೂ ಅವಕಾಶ!

aap
Published on

ಬೆಂಗಳೂರು: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಎಎಪಿ ಸುದ್ದಿಗಷ್ಟಿ ನಡೆಸಿದ್ದು ಈ ಸಂದರ್ಭದಲ್ಲಿ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿಕೆ ನೀಡಿದ್ದಾರೆ.

'ಬೇರೆ‌ ಪಕ್ಷಗಳಿಗಿಂತಲೂ ಉತ್ತಮವಾಗಿ ಎಎಪಿ ಚುನಾವಣೆಗೆ ಸಿದ್ಧವಾಗಿದೆ. ಜನಸಾಮಾನ್ಯರಿಗೆ ಎಎಪಿ ಅವಕಾಶ ಕೊಟ್ಟಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಾಮಾಣಿಕ ಆಯ್ಕೆ ನಡೆಯಲಿದೆ. ಈಗಾಗಲೇ 80 ಅಭ್ಯರ್ಥಿಗಳ ಪಟ್ಟಿ‌ ಬಿಡುಗಡೆ ಮಾಡಿದೆ. ಇವತ್ತು 60 ಅಭ್ಯರ್ಥಿಗಳ ಪಟ್ಟಿ‌ಬಿಡುಗಡೆ ಮಾಡ್ತಿದ್ದೇವೆ. 11 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. 14 ರೈತರಿಗೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಓರ್ವ ಬಿಎಂಟಿಸಿ ಮಾಜಿ ಕಂಡಾಕ್ಟರ್ ಗೂ ಅವಕಾಶ ನೀಡಿದ್ದೇವೆ. 46% ಜನ ಈಗಾಗಲೇ ಸಮೀಕರಣ ಪ್ರಕಾರ‌ ಕಾಂಗ್ರೆಸ್ ಬೇಡ ಅಂದಿದ್ದಾರೆ. ಪಂಜಾಬ್​ನಲ್ಲಿ ಹಾಲಿ ಮುಖ್ಯಮಂತ್ರಿ ಸೋಲಿಸಿದ ವ್ಯಕ್ತಿ ಓರ್ವ ಮೊಬೈಲ್ ಅಂಗಡಿ ರಿಪೇರಿ ಮಾಡುವವನು' ಎಂದಿದ್ದಾರೆ.

ನಂತರ ಬ್ರಿಜೇಶ್ ಕಾಳಪ್ಪ ಎಎಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಒಂದಷ್ಟು ಪ್ರಮುಖ ಕ್ಷೇತ್ರಗಳ ವಿವರ ಹೀಗಿದೆ:

ಕಾಗವಾಡ - ಕುರಪ್ಪ
ಜೇವರ್ಗಿ - ವಿಶ್ವನಾಥ ರೆಡ್ಡಿ
ಚಿತ್ರಾಪುರ - ಜಗದೀಶ್ ಸಾಗರ್
ಶಿರಾಹಟ್ಟಿ - ಮಲ್ಲಿಕಾರ್ಜುನ ದೊಡ್ಡಮನಿ
ಹಾನಗಲ್ - ಸಾಯಿಕುಮಾರ್
ಹಡಗಲಿ - ಶ್ರೀಧರ್‌ನಾಯ್ಕ್
ಬಳ್ಳಾರಿ‌ನಗರ - ಯರಿಸ್ವಾಮಿ
ಉಡುಪಿ - ಪ್ರಭಾಕರ್ ಪೂಜಾರಿ
ಗೌರಿಬಿದನೂರು‌- ಸಯ್ಯದ್ ಖಾಸಿಂ‌ಅಲಿ
ಮಹದೇವಪುರ - ನಟರಾಜ್ ಸಿ‌ಆರ್
ಮದ್ದೂರು - ಆನಂದ
ಮೇಲುಕೋಟೆ ‌- ಅಶೋಕ್ ಹೆಚ್ ಆರ್
ಶ್ರವಣಬೆಳಗೊಳ‌- ಮಂಜೇಗೌಡ
ಮಡಿಕೇರಿ - ಪಿಕೆ ಸಾಯಿಕುಮಾರ್
ನಂಜನಗೂಡು & ಹನುಮಯ್ಯ
ವರುಣ - ರಾಜೇಶ್ ಸಿಎಸ್
ಚಾಮರಾಜನಗರ- ಡಾ.ಗುರುಪ್ರಸಾದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net