BBKS11: 'ಬಿಗ್'​ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಯಮುನಾ! ಇದರೊಟ್ಟಿಗೆ ಹೊಸ ಟ್ವಿಸ್ಟ್​

eliminated
Published on

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss Kannada season 11) ಮನರಂಜನಾ ಕಾರ್ಯಕ್ರಮ ಇದೀಗ ಹೊಸ ರೂಪ ಪಡೆದುಕೊಂಡಿದ್ದು,​ ಸೀಸನ್ 10ರ ಯಶಸ್ಸಿನ ಬೆನ್ನಲ್ಲೇ ಸೀಸನ್​ 11ರ ಭರ್ಜರಿ ಯಶಸ್ಸಿಗೆ ಬಿಗ್ ತಂಡ ದೊಡ್ಡ ಹೆಜ್ಜೆಯನ್ನೇ ಇಟ್ಟಿರುವುದು ಇದೀಗ ಮತ್ತಷ್ಟು ಸ್ಪಷ್ಟವಾಗಿದೆ. 17 ಘಟಾನುಘಟಿ ಸ್ಪರ್ಧಿಗಳು ಬಿಗ್ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಕಿಚ್ಚಿಗೆ ನಾಂದಿ ಹಾಡಿ ಇಂದು ಒಂದು ವಾರ ಪೂರ್ಣಗೊಳಿಸಿದ್ದಾರೆ. ಸೀಸನ್ 11ರ ಮೊದಲ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಕೆಲವರಿಗೆ ಚಳಿಬಿಡಿಸಿದ ಕಿಚ್ಚ​, ಸೂಪರ್ ಸಂಡೆ ವಿತ್​ ಸುದೀಪ್​ ಕಾರ್ಯಕ್ರಮದಲ್ಲಿ ಯಾರು ಮನೆಯಿಂದ ಹೊರಹೋಗಲಿದ್ದಾರೆ ಎಂಬುದರ ಜತೆಗೆ ದೊಡ್ಡ ಟ್ವಿಸ್ಟ್​ವೊಂದನ್ನು ರಿವೀಲ್ ಮಾಡಿದ್ದಾರೆ.

ಈ ಹಿಂದೆಯಿದ್ದ ಸ್ವರ್ಗ ಮತ್ತು ನರಕ ನಿವಾಸಿಗಳು

ಸ್ವರ್ಗ ಸೇರಿದ ಸ್ಪರ್ಧಿಗಳು: ಧನರಾಜ್​ ಆಚಾರ್​, ಗೌತಮಿ ಜಾಧವ್​, ಲಾಯರ್​ ಜಗದೀಶ್​, ತ್ರಿವಿಕ್ರಮ್​, ಯಮುನಾ ಶ್ರೀನಿಧಿ, ಭವ್ಯಾ, ಹಂಸಾ ಪ್ರತಾಪ್​, ಐಶ್ವರ್ಯಾ ಶಿಂಧೋಗಿ ಮತ್ತು ಉಗ್ರಂ ಮಂಜು.

ನರಕಕ್ಕೆ ಹೋದ ಸ್ಪರ್ಧಿಗಳು: ಅನುಷಾ ರೈ, ಶಿಶಿರ್​ ಶಾಸ್ತ್ರಿ, ಗೋಲ್ಡ್​ ಸುರೇಶ್​, ಮಾನಸಾ ಸಂತೋಷ್​, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಮತ್ತು ರಂಜಿತ್​.

ಅದಲು-ಬದಲು ನಂತರ

ನರಕದಲ್ಲಿದ್ದ ರಂಜೀತ್​ ಅವರನ್ನು ಕ್ಯಾಪ್ಟನ್​ ಹಂಸಾ ಸ್ವರ್ಗಕ್ಕೆ ಕರೆತಂದರೆ, ಸ್ವರ್ಗದಿಂದ ನರಕಕ್ಕೆ ಲಾಯರ್​ ಜಗದೀಶ್​ರನ್ನು ಕಳಿಸಿದ್ದಾರೆ. ಇದು ಬಿಗ್ ಮನೆಯಲ್ಲಿ ದೊಡ್ಡ ಅದಲು-ಬದಲು ತಂದಿದೆ.

ಎಲಿಮಿನೇಟ್ ಆದ ಮೊದಲ ಸ್ಪರ್ಧಿ

ಇನ್ನು ಮನೆಯಿಂದ ಕಿರುತೆರೆ ನಟಿ ಯಮುನಾ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net