BBKS11: 'ಬಿಗ್' ಮನೆಯಿಂದ ದಿಢೀರ್​ ಹೊರಬಂದ್ರಾ ಚೈತ್ರಾ? ಕ್ಯಾಮರಾ ಮುಂದೆ ಕಣ್ಣೀರಿಟ್ಟ ಸ್ಪರ್ಧಿ

ವಿಜಯವಾಣಿ - 2024-11-16T205616.537
Published on

ಬೆಂಗಳೂರು: ಕನ್ನಡ ಬಿಗ್ ಬಾಸ್​ ಸೀಸನ್ 11 ಪ್ರಾರಂಭಗೊಂಡು ಇಂದಿಗೆ ಒಂದು ತಿಂಗಳೇ ಕಳೆದಿದೆ. ಮನೆಯಲ್ಲಿ ಸ್ಪರ್ಧಿಗಳ ಆಟದ ಜಗ್ಗಾಟ ಜೋರಾಗಿದ್ದು, ಪ್ರತಿಯೊಬ್ಬ ಸದಸ್ಯರು ಖಡಕ್ ಆಗಿ ಅಖಾಡಕ್ಕಿಳಿದಿರುವುದು ವೀಕ್ಷಕರಿಗೆ ಕಾಣಿಸುತ್ತಿದೆ. ಒಂದೆಡೆ ಕಳೆದ ವಾರ ಯಾರೊಬ್ಬರು ಮನೆಯಿಂದ ಹೊರಹೋಗದೆ, ಎಲಿಮಿನೇಷನ್​ನಿಂದ ಪಾರಾಗಿದ್ದು ವೀಕ್ಷಕರಲ್ಲಿ ಗೊಂದಲ ಮೂಡಿಸಿತು. ಬಹುಶಃ ಈ ವಾರ ಇಬ್ಬರನ್ನು ಎಲಿಮಿನೇಟ್ ಮಾಡುವ ಸಾಧ್ಯತೆಗಳು ಇರಬಹುದು ಎಂದು ಊಹಿಸುತ್ತಿರುವ ನೋಡುಗರಿಗೆ ಇಂದಿನ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯ ಬಿಸಿ ಅರ್ಥವಾಗಿದೆ.

7ನೇ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಅವರಿಗೆ ಸುದೀಪ್ ವಿಶೇಷ ಕ್ಲಾಸ್​ ತೆಗೆದುಕೊಂಡಿದ್ದಾರೆ. ಶೌಚಗೃಹದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಚೈತ್ರಾಗೆ ಬಿಗ್​ ಬಾಸ್​ ವೈದ್ಯರ ಬಳಿ ಅಗತ್ಯ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆಗೆಂದು ವೈದ್ಯರನ್ನು ಸಂಪರ್ಕಿಸಿದ ಚೈತ್ರಾ, ಅಲ್ಲಿಂದ ಒಂದಷ್ಟು ವಿಷಯಗಳನ್ನು ತಿಳಿದುಕೊಂಡು ಬಂದೆ ಎಂದು ಮನೆಯ ಸ್ಪರ್ಧಿಗಳ ಬಳಿ ತಮ್ಮ ಅಭಿಪ್ರಾಯಗಳನ್ನು ಹೇರಿದ್ದಾರೆ. ತ್ರಿವಿಕ್ರಮ್​ ನಿಮಗೆ ಇಲ್ಲಿ ಬೆಲೆಯೇ ಇಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಚೈತ್ರಾಗೆ ಪ್ರಶ್ನೆಗಳ ಸುರಿಮಳೆ ಹರಿಸಿದ ಕಿಚ್ಚ ಸುದೀಪ್​, ಮನೆ ಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತೀರಿ. ಆನಂತರ ಇಲ್ಲಿಗೆ ಬಂದು ಹೀಗೆ ಹೇಳ್ತೀರಿ? ಏನಿದು. ಇವೆಲ್ಲಾ ಹೇಳುವ ಉದ್ದೇಶ ಏನು? ಎಂದು ನೇರವಾಗಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಲು ಚಡಪಡಿಸಿದ ಚೈತ್ರಾ, ಕಣ್ಣೀರಿಟ್ಟಿದ್ದಾರೆ. ನಂತರ ಕ್ಯಾಮರಾ ಮುಂದೆ ಹೋಗಿ, ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲು ನನಗೆ ಕಷ್ಟವಾಗುತ್ತಿದೆ. ಹೀಗಾಗಿ ಮನೆಗೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅಸಲಿಗೆ ಚೈತ್ರಾ ಮನೆಯಿಂದ ಹೊರಬಂದ್ರಾ? ಎಂಬುದನ್ನು ಸದ್ಯ ಸಂಚಿಕೆಯ ಕೊನೆಯವರೆಗೂ ನೋಡಿ ತಿಳಿದುಕೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net