

ಬೆಂಗಳೂರು: ಬಿಗ್ ಬಾಸ್ ಸೀಸನ್ 11ರ ಏಳನೇ ವಾರದಲ್ಲಿ ಬಿಗ್ ಮನೆಯಿಂದ ಅನುಷಾ ರೈ ಎಲಿಮಿನೇಟ್ ಆಗಿದ್ದಾರೆ. ಮನೆಯೊಳಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಒಳಗೆ ಬರುತ್ತಿದ್ದಂತೆ ಅನುಷಾ ಮತ್ತು ಧರ್ಮ ನಡುವೆ ಇದೀಗ ಅನುಷಾ ಮನೆಯಿಂದ ಹೊರಬಿದ್ದಿದ್ದಾರೆ.
ಕಳೆದ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎಂದು ಖುಷಿಯಲ್ಲಿದ್ದ ಬಿಗ್ ಬಾಸ್ ಮಂದಿ, ಈ ವಾರ ನಾಮಿನೇಟ್ ಆದವರ ಪೈಕಿ ಯಾರೊಬ್ಬರು ಹೋಗುವುದು ಖಚಿತ, ಅದು ಯಾರು ಎಂಬ ಯೋಚನೆಯಲ್ಲಿದ್ದರು. ಆದರೆ, ಅಂತಿಮವಾಗಿ ಇಬ್ಬರು ಬೇಕಾದರೂ ಹೋಗಬಹುದು, ಒಬ್ಬರಾದರೂ ಹೋಗಬಹುದು, ಇಲ್ಲವೇ ಇಬ್ಬರೂ ಸಹ ಎಲಿಮಿನೇಟ್ ಆಗಬಹುದು ಎಂದು ಸುದೀಪ್ ಹೇಳಿದರು.
ಧರ್ಮ ಮತ್ತು ಅನುಷಾ ರೈ ನಡುವೆ ರೆಡ್ ಲೈಟ್ ಅನುಷಾ ರೈ ತಲೆ ಮೇಲೆ ಬಿದ್ದ ಹಿನ್ನಲೆ ಇದೀಗ ಅವರು ಎಲಿಮಿನೇಟ್ ಆಗಿ 50ನೇ ದಿನಕ್ಕೆ ಮನೆಯಿಂದ ಹೊರಬಂದಿದ್ದಾರೆ.